ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಒಂದೇ ಸಭೆಯಲ್ಲಿದ್ದರೂ ಮಾತುಕತೆ ನಡೆಸದ ಕೃಷ್ಣ-ಖುರೇಷಿ (SM Krishna | Shah Mehmood Qureshi | CHOGM | India)
Bookmark and Share Feedback Print
 
ಮುಂಬೈ ದಾಳಿ ನಡೆದ ವರ್ಷದ ನಂತರ ಭಾರತ ಮತ್ತು ಪಾಕಿಸ್ತಾನಗಳ ವಿದೇಶಾಂಗ ಸಚಿವರುಗಳು ಟ್ರಿನಿಡಾಡ್ ಮತ್ತು ಟೊಬಾಗೋ ರಾಜಧಾನಿಯಲ್ಲಿದ್ದರೂ ಯಾವುದೇ ಮಾತುಕತೆ ನಡೆಸದೆ ತಮ್ಮ ಮೌನವನ್ನು ಮುಂದುವರಿಸಿದ್ದಾರೆ.

ಮುಂಬೈ ದಾಳಿಯ ಹಿಂದಿರುವ ಶಕ್ತಿಗಳ ವಿರುದ್ಧ ಪಾಕಿಸ್ತಾನವು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕೆಂದು ಭಾರತ ಬಯಸುತ್ತಿದ್ದು, ಇದೇ ನಿಟ್ಟಿನಿಂದ ಆ ದೇಶದ ಜತೆಗಿನ ರಾಜತಾಂತ್ರಿಕ ಮಾತುಕತೆಗಳನ್ನು ಅಲಕ್ಷ್ಯ ಮಾಡುತ್ತಿದೆ. ಈ ರೀತಿಯ ಒತ್ತಡ ತಂತ್ರದ ಮೂಲಕ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂಬುವುದು ಭಾರತದ ಯೋಚನೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಮತ್ತು ಪಾಕಿಸ್ತಾನದ ವಿದೇಶಾಂಕ ಮಂತ್ರಿ ಶಾ ಮೆಹಮೂದ್ ಖುರೇಷಿಯವರು ಟ್ರಿನಿಡಾಡ್ ಮತ್ತು ಟೊಬಾಗೋ ರಾಜಧಾನಿಯಲ್ಲಿನ ಕಾಮನ್‌ವೆಲ್ತ್ ರಾಷ್ಟ್ರಗಳ ವಿದೇಶಾಂಗ ಸಚಿವರುಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಾಮನ್‌ವೆಲ್ತ್ ರಾಷ್ಟ್ರಗಳ ಸರಕಾರಗಳ ಮುಖ್ಯಸ್ಥರ ಸಭೆಯಲ್ಲೂ ಪಾಕಿಸ್ತಾನವನ್ನು ಖುರೇಷಿಯವರು ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅಥವಾ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಈ ಸಮಾವೇಶಕ್ಕೆ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ದೇಶದ ಹದಗೆಟ್ಟ ಪರಿಸ್ಥಿತಿ ಹಿನ್ನಲೆಯಲ್ಲಿ ಅವರು ಗೈರು ಹಾಜರಾಗಿದ್ದಾರೆ.

ಮುಂಬೈ ಭಯೋತ್ಪಾದಕ ದಾಳಿಯ ರೂವಾರಿಗಳನ್ನು ಕಟಕಟೆಗೆ ತರದ ಹೊರತು ಭಾರತ ಸರಕಾರವು ವಿಶ್ರಮಿಸುವುದಿಲ್ಲ ಎಂದು ನಾಲ್ಕು ದಿನಗಳ ಹಿಂದೆ ವಾಷಿಂಗ್ಟನ್‌ನಲ್ಲಿ ಸ್ಪಷ್ಟಪಡಿಸಿದ್ದ ಪ್ರಧಾನಿ ಮನಮೋಹನ್ ಸಿಂಗ್, ಉಗ್ರರ ಮೂಲಭೂತ ವ್ಯವಸ್ಥೆ ಮತ್ತು ಭಯೋತ್ಪಾದನೆಯ ಪೂರಕ ವಾತಾವರಣವನ್ನು ನಿಷ್ಕ್ರಿಯಗೊಳಿಸುವಂತೆ ಪಾಕಿಸ್ತಾನವನ್ನು ಆಗ್ರಹಿಸಿದ್ದರು.

ಮುಂಬೈ ದಾಳಿ ಸಂಬಂಧ ಲಷ್ಕರ್ ಇ ತೋಯ್ಬಾ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಸೈಯದ್‌ನನ್ನು ಶಿಕ್ಷಿಸಲು ಅಗತ್ಯವಿರುವ ಸಾಕಷ್ಟು ದಾಖಲೆಗಳನ್ನು ಭಾರತ ಹಸ್ತಾಂತರಿಸಿಲ್ಲ ಎಂದು ಕೆಲವು ದಿನಗಳ ಹಿಂದಷ್ಟೇ ಸುದ್ದಿ ವಾಹಿನಿಯೊಂದರ ಜತೆ ಮಾತನಾಡುತ್ತಾ ಖುರೇಷಿ ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ