ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೆಡ್ಲಿ, ರಾಣಾ ಬಗ್ಗೆ ಭಾರತಕ್ಕೆ ಎಫ್‌ಬಿಐ ಮಾಹಿತಿ (Headley | Rana | FBI Information)
Bookmark and Share Feedback Print
 
ಮುಂದಿನ ವಾರ ಉನ್ನತ ಮಟ್ಟದ ಎಫ್‌ಬಿಐ ತಂಡವು ತಮ್ಮ ತನಿಖೆಯ ಎಲ್ಲಾ ವಿವರಗಳೊಂದಿಗೆ ಭಾರತಕ್ಕೆ ಭೇಟಿ ನೀಡಿದಾಗ, ಲಷ್ಕರೆ ಉಗ್ರಗಾಮಿ ಸಂಘಟನೆಯ ಶಂಕಿತ ಸದಸ್ಯರಾಗಿರುವ ಡೇವಿಡ್ ಹೆಡ್ಲಿ ಮತ್ತು ತಹವೂರ್ ರಾಣಾರ ವಿಧ್ವಂಸಕ ಕೃತ್ಯಗಳ ಯೋಜನೆ ಮತ್ತು ಲಷ್ಕರೆ ಸಂಘಟನೆಯ ಜಾಲದ ಕುರಿತು ಮಾಹಿತಿ ನೀಡಲಿದ್ದಾರೆ ಎಂಬುದಾಗಿ ಭಾರತ ನಿರೀಕ್ಷಿಸಿದೆ.

ಹೆಡ್ಲಿ ಮತ್ತು ರಾಣಾಗೆ ಸಂಬಂಧಿಸಿದ ಪ್ರಕರಣವನ್ನು ತಾನು ಪಡೆದಿರುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ತಿಳಿಸಿದ್ದಾರೆಂದು ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ. ನಾರಾಯಣ್ ಹೇಳಿದ್ದಾರೆ.

ಎಲ್ಲ ವಿವರಗಳನ್ನೊಳಗೊಂಡಿರುವ ಉನ್ನತ ಮಟ್ಟದ ಎಫ್‌ಬಿಐ ತಂಡವನ್ನು ಭಾರತಕ್ಕೆ ಕಳುಹಿಸುವುದಾಗಿ ಒಬಾಮ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿರುವ ವೇಳೆಗೆ ತಿಳಿಸಿದ್ದಾರೆಂದು ನಾರಾಯಣ್ ಅವರು ಹೇಳಿದರು. ಅವರು ಪ್ರಧಾನಿಯವರ ಅಮೆರಿಕ ಪ್ರವಾಸದ ವೇಳೆ ಅವರೊಂದಿಗೆ ತೆರಳಿರುವ ಪತ್ರಕರ್ತರನ್ನುದ್ದೇಶಿಸಿ ವಿಮಾನದಲ್ಲಿ ಮಾತನಾಡುತ್ತಿದ್ದರು.
ಸಂಬಂಧಿತ ಮಾಹಿತಿ ಹುಡುಕಿ