ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆತ್ಮಾಹುತಿ ಬಾಂಬರ್ ಸ್ಫೋಟಕ್ಕೆ 33 ಜನರ ಬಲಿ (Explosive | Islamabad | Pakistan | Kohat)
Bookmark and Share Feedback Print
 
ವಾಯವ್ಯ ಪಾಕಿಸ್ತಾನದಲ್ಲಿ ಕಿಕ್ಕಿರಿದ ಮಾರುಕಟ್ಟೆಯಲ್ಲಿ ಸ್ಫೋಟಕ ತುಂಬಿದ ಜೀಪೊಂದರಲ್ಲಿ ಆತ್ಮಾಹುತಿ ಬಾಂಬರ್‌ ಸ್ಫೋಟಿಸಿಕೊಂಡು ಕನಿಷ್ಠ 33 ಜನರು ಸತ್ತಿದ್ದಾರೆ ಮತ್ತು 65 ಮಂದಿ ಗಾಯಗೊಂಡಿದ್ದಾರೆ. ವಾಯವ್ಯ ಮುಂಚೂಣಿ ಪ್ರಾಂತ್ಯದ ಕೊಹಾಟ್ ಜಿಲ್ಲೆಯ ಕಚ್ಚಾ ಪಕ್ಕಾ ಮಾರುಕಟ್ಟೆ ಮೇಲೆ ಬಾಂಬರ್ ಗುರಿಯಿರಿಸಿದ್ದ.

ಈದ್-ಉಲ್-ಫಿತರ್ ರಜಾದಿನಗಳಲ್ಲಿ ತಮ್ಮ ತವರುಪಟ್ಟಣಗಳಿಗೆ ಪ್ರಯಾಣಿಸಲು ವಾಹನಗಳನ್ನು ಹತ್ತಲು ಅಸಂಖ್ಯಾತ ಜನರು ನೆರೆದಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಆತ್ಮಾಹುತಿ ಬಾಂಬರ್ ಗುಂಪಿನೊಳಗೆ ಜೀಪನ್ನು ನುಗ್ಗಿಸಿ, ಸ್ಫೋಟಕಗಳನ್ನು ಸ್ಫೋಟಿಸಿದ. ಸುಮಾರು 12 ಜನರು ಮತ್ತು ರಕ್ಷಣಾ ಕಾರ್ಯಕರ್ತರು ತಕ್ಷಣವೇ ಸತ್ತಿದ್ದಾರೆ.

ಸ್ಫೋಟದ ರಭಸಕ್ಕೆ ಒಂದು ಹೊಟೆಲ್ ಮತ್ತು ಅನೇಕ ಅಂಗಡಿಗಳು ಕುಸಿದಿದ್ದು, ಇನ್ನಷ್ಟು ದೇಹಗಳನ್ನು ಹೊಟೆಲ್ ಅವಶೇಷದಿಂದ ಹೊರತೆಗೆಯಲಾಗಿದೆ.ಸುಮಾರು 65 ಜನರು ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸುಮಾರು 150 ಕೇಜಿ ಸ್ಫೋಟಕಗಳನ್ನು ದಾಳಿಯಲ್ಲಿ ಬಳಸಿರಬಹುದೆಂದು ಶಂಕಿಸಲಾಗಿದೆ. ಸುಮಾರು 5 ಕಿಮೀನಿಂದ ಕೇಳಿಸಿದ ಸ್ಫೋಟವು ಕೊಹಾಟ್ ನಗರದಲ್ಲಿ ಭಯ ಮ‌ೂಡಿಸಿದೆ. ಯಾವುದೇ ಗುಂಪು ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.

ಸಮೀಪದ ಓರ್ಕಜಾಯ್ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್ ವಿರುದ್ಧ ಆರಂಭಿಸಿದ ಕಾರ್ಯಾಚರಣೆಗೆ ಪ್ರತೀಕಾರದ ಕ್ರಮವಾಗಿ ದಾಳಿ ನಡೆದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಸ್ಫೋಟದ ಸ್ಥಳವನ್ನು ಸುತ್ತುವರಿದಿದ್ದು, ಆತ್ಮಾಹುತಿ ಬಾಂಬರ್‌ನ ಸಹಚರರಿಗಾಗಿ ಶೋಧಿಸುತ್ತಿದ್ದಾರೆ.

ಕಪ್ಪು ಹೊಗೆ ಪ್ರದೇಶದಲ್ಲಿ ಆವರಿಸುತ್ತಿದ್ದಂತೆ ಮಾರುಕಟ್ಟೆಯಲ್ಲಿ ಮಾನವರ ದೇಹದ ಮಾಂಸದ ಚೂರುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಶಕ್ತಿಶಾಲಿ ಸ್ಫೋಟದಿಂದ ಮಾರುಕಟ್ಟೆಯ ಬಹುತೇಕ ಕಟ್ಟಡಗಳು ಕುಸಿದಿದ್ದು, ಅನೇಕ ವಾಹನಗಳು ನಾಶವಾಗಿವೆ. ಪಾಕಿಸ್ತಾನದಲ್ಲಿ ಉಗ್ರಗಾಮಿಗಳು ಪದೇ ಪದೇ ಸ್ಫೋಟಗಳನ್ನು ನಡೆಸುವ ಮ‌ೂಲಕ ರಕ್ತದೋಕುಳಿ ಹರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ