ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಇರಾನ್ ಪರಮಾಣು ಕಾರ್ಯಕ್ರಮಕ್ಕೆ ಕಾಲ ಮೀರುತ್ತಿದೆ' (United States | Iran | Uranium |White House)
Bookmark and Share Feedback Print
 
ತನ್ನ ಪರಮಾಣು ಕಾರ್ಯಕ್ರಮದ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಹೆಚ್ಚುತ್ತಿರುವ ಕಳವಳವನ್ನು ನೀಗಿಸಲು ಇರಾನ್‌ಗೆ ಕಾಲಮೀರಿ ಹೋಗುತ್ತಿದೆಯೆಂದು ಅಮೆರಿಕ ಮಂಗಳವಾರ ತಿಳಿಸಿದೆ.

ಇರಾನ್ 10 ಹೊಸ ಯುರೇನಿಯಂ ಸಂಸ್ಕರಣ ಸೌಲಭ್ಯಗಳನ್ನು ವಿಶ್ವಸಂಸ್ಥೆ ಆದೇಶಗಳನ್ನು ಉಲ್ಲಂಘಿಸಿ ನಿರ್ಮಿಸುತ್ತಿದ್ದು, ಈ ಪ್ರಕ್ರಿಯೆಗೆ ವ್ಯಾಪಕ ಅಂತಾರಾಷ್ಟ್ರೀಯ ವಿರೋಧ ವ್ಯಕ್ತವಾಗಿದೆ.ಇದು ನಿಜವಾಗಿದ್ದರೆ, ವಿಶ್ವಸಂಸ್ಥೆಯ ಭದ್ರತಾ ನಿರ್ಣಯಗಳ ಅಡಿಯಲ್ಲಿ ಸ್ಪಷ್ಟ ಕರ್ತವ್ಯಗಳ ಉಲ್ಲಂಘನೆಯಾಗಿದ್ದು, ಇರಾನ್ ಸ್ವತಃ ಏಕಾಂಗಿಯಾಗಲು ಆಯ್ಕೆ ಮಾಡಿಕೊಂಡಿರುವ ಇನ್ನೊಂದು ಉದಾಹರಣೆಯಾಗಿದೆಯೆಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ರಾಬರ್ಟ್ ಗಿಬ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇರಾನ್ ಕ್ಯಾಬಿನೆಟ್ ಸಂಸ್ಕರಣೆ ಘಟಕಗಳಿಗೆ ಮೀಸಲಾದ ಐದು ಹೊಸ ನಿವೇಶನಗಳಲ್ಲಿ ನಿರ್ಮಾಣ ಆರಂಭಿಸುವಂತೆ ಇರಾನ್ ಟೆಲಿವಿಷನ್ ವರದಿ ಮಾಡಿದ್ದು, ಮುಂದಿನ ಎರಡು ತಿಂಗಳಲ್ಲಿ ಇನ್ನೂ ಐದು ಸ್ಥಳಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇರಾನ್‌ಗೆ ಹಕ್ಕುಗಳಿವೆ ಎಂದು ಅಂತಾರಾಷ್ಟ್ರೀಯ ಸಮುದಾಯ ಸ್ಪಷ್ಟಪಡಿಸಿದೆ. ಆದರೆ ಆ ಹಕ್ಕುಗಳೊಂದಿಗೆ ಜವಾಬ್ದಾರಿಗಳು ಬರುತ್ತವೆ. ಐಎಇಎ ಮಂಡಳಿ ಗವರ್ನರ್‌ಗಳು ಸ್ಪಷ್ಟಪಡಿಸಿರುವಂತೆ, ಅಂತಾರಾಷ್ಟ್ರೀಯ ಸಮುದಾಯದ ಕಳವಳ ನಿವಾರಣೆಗೆ ಇರಾನ್‌ಗೆ ಕಾಲಮೀರಿಹೋಗುತ್ತಿದೆಯೆಂದು ಗಿಬ್ಸ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ