ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಸೀದಿ ಗೋಪುರ ನಿರ್ಮಾಣಕ್ಕೆ ಸ್ವಿಸ್ ಸರ್ಕಾರ ನಿಷೇಧ (Swiss | Mosque | Minaret | Muslim)
Bookmark and Share Feedback Print
 
ಮಸೀದಿಯ ಸ್ತಂಭ ಗೋಪುರ ನಿರ್ಮಾಣಕ್ಕೆ ಸಂವಿಧಾನಿಕ ನಿಷೇಧವನ್ನು ಸ್ವಿಸ್ ಸರ್ಕಾರ ಜನಾದೇಶದ ಮ‌ೂಲಕ ಅನುಮೋದಿಸಿದೆ. ಇದರಿಂದಾಗಿ ಬೆಳೆಯುತ್ತಿರುವ ಮುಸ್ಲಿಂ ಜನಸಂಖ್ಯೆಯ ವಿರುದ್ಧ ಯುರೋಪ್ ಪ್ರತಿಕ್ರಮದಲ್ಲಿ ಸ್ವಿಜರ್‌ಲ್ಯಾಂಡ್ ಮುಂಚೂಣಿ ಪಾತ್ರ ವಹಿಸಿದೆ. ಗೋಪುಗಳ ನಿರ್ಮಾಣಕ್ಕೆ ಸಂವಿಧಾನಿಕ ನಿಷೇಧ ವಿಧಿಸಿರುವ ಕ್ರಮದ ವಿರುದ್ಧ ಸ್ವಿಸ್ ಮತ್ತು ವಿದೇಶಗಳ ಮುಸ್ಲಿಂ ಸಮುದಾಯ ಖಂಡಿಸಿದೆ.

ಈ ನಿರ್ಧಾರದಿಂದ ಸ್ವಿಸ್ ಅಂತಾರಾಷ್ಟ್ರೀಯ ನಿಲುವಿಗೆ ನೋವುಂಟು ಮಾಡುತ್ತದೆ ಮತ್ತು ಸ್ವಿಸ್ ಜತೆ ಮುಸ್ಲಿಂ ರಾಷ್ಟ್ರಗಳು ಮತ್ತು ಅಲ್ಲಿ ವ್ಯವಹರಿಸುವ, ಪ್ರಯಾಣ ಮಾಡುವ, ಖರೀದಿ ಮಾಡುವ ಶ್ರೀಮಂತ ಹೂಡಿಕೆದಾರರ ಜತೆ ಸಂಬಂಧಕ್ಕೆ ಧಕ್ಕೆಯಾಗುತ್ತದೆ ಎಂಜು ಉದ್ಯಮ ಸಮ‌ೂಹ ಟೀಕಿಸಿದೆ. ಇದು ಪಕ್ಷಪಾತದ ಮತ್ತು ಮುಸ್ಲಿಂ ವಿರೋಧಿ ಕ್ರಮ ಎಂದು ಮುಸ್ಲಿಂ ಗುಂಪುಗಳು ಖಂಡಿಸಿವೆ.

ಸ್ವಿಸ್ ವೈವಿಧ್ಯತೆ, ಸ್ವಾತಂತ್ರ್ಯ, ಧರ್ಮ ಮತ್ತು ಮಾನವಹಕ್ಕುಗಳಿಗೆ ಸ್ಪಷ್ಟ ಸಂದೇಶ ನೀಡಲು ವಿಫಲವಾಗಿದೆಯೆಂದು ಆಸ್ಟ್ರಿಯದ ಇಸ್ಲಾಂ ಒಕ್ಕೂಟದ ಪ್ರತಿನಿಧಿ ತಿಳಿಸಿದ್ದಾರೆ.ಸುಮಾರು 300 ಜನರು ಸಂಸತ್ತಿನ ಹೊರಗಿರುವ ಚೌಕದ ಬಳಿ 300 ಮುಸ್ಲಿಮರು ಪ್ರದರ್ಶನ ನಡೆಸಿದರು. 'ಇದು ನಮ್ಮ ಸ್ವಿಜರ್‌ಲ್ಯಾಂಡ್ ಅಲ್ಲ'ವೆಂಬ ಚಿಹ್ನೆಗಳ ಬ್ಯಾನರ್‌‌ಗಳನ್ನು ಹಿಡಿದು, ಗೋಪುರದ ಮಾದರಿಯೊಂದರ ಮುಂದೆ ಮೊಂಬತ್ತಿಗಳನ್ನು ಇರಿಸಿ, ಮೊಂಬತ್ತಿಗಳಿಂದಲೇ ಇನ್ನೊಂದು ಗೋಪುರ ರೂಪಿಸಿದ್ದಾರೆ.

ಸ್ವಿಸ್ ಪಾಸ್‌ಪೋರ್ಟ್ ಮಾರಾಟಕ್ಕಿದೆ ಎಂದು ಬರೆದಿರುವಕಾಗದದ ಚೂರನ್ನು ತಮ್ಮ ಚಾಕೆಟ್‌ಗೆ ಯುವತಿಯೊಬ್ಬಳು ಸಿಕ್ಕಿಸಿಕೊಂಡು ಪ್ರತಿಭಟನೆ ನಡೆಸಿದಳು. ರಾಷ್ಟ್ರೀಯ ಸ್ವಿಸ್ ಪೀಪಲ್ಸ್ ಪಕ್ಷದ ಜನಾದೇಶದಲ್ಲಿ ಗೋಪುರಗಲು ಮುಸ್ಲಿಂ ರಾಜಕೀಯ ಶಕ್ತಿಯ ಬೆಳೆಯುತ್ತಿರುವ ಸಂಕೇತವಾಗಿದ್ದು, ಸ್ವಿಜರ್‌ಲ್ಯಾಂಡನ್ನು ಇಸ್ಲಾಮಿಕ್ ರಾಷ್ಟ್ರವಾಗಿ ರೂಪಿಸಬಹುದೆಂಬುದು ಜನಾದೇಶದ ಹಣೆಪಟ್ಟಿಯಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ವಿಸ್, ಜನಾದೇಶ, ಮುಸ್ಲಿಂ, ಗೋಪುರ