ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯೋತ್ಪಾದನೆಗೆ ಸ್ಫೂರ್ತಿ ನೀಡಿದ ಲಾಡೆನ್ ಎಸ್ಕೇಪ್ (Laden | Tora Bora | Troops | Terrorist)
Bookmark and Share Feedback Print
 
ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ವಿರುದ್ಧ ಭಾರೀ ಪಡೆಯೊಂದಿಗೆ ಕಾರ್ಯಾಚರಣೆ ನಡೆಸದಿರುವ ನಿರ್ಣಾಯಕ ಮತ್ತು ದುಬಾರಿ ನಿರ್ಧಾರ ಕೈಗೊಂಡಾಗ ಅವನು ಟೋರಾ ಬೋರಾ ಪರ್ವತ ಪ್ರದೇಶದಲ್ಲಿ ಅಮೆರಿಕದ ಪಡೆಗಳ ಕೈಗೆಸಿಗುವಷ್ಟು ಹತ್ತಿರದಲ್ಲೇ ಇದ್ದನೆಂದು ಸೆನೆಟ್ ವರದಿಯೊಂದು ತಿಳಿಸಿದೆ.

2001ರ ಡಿಸೆಂಬರ್‌ನಲ್ಲಿ ಅಮೆರಿಕ ತೆಗೆದುಕೊಂಡ ದುಬಾರಿ ನಿರ್ಧಾರದಿಂದಾಗಿ ಅವನನ್ನು ಸೆರೆಹಿಡಿಯಲು ಅಥವಾ ಹತ್ಯೆಮಾಡಲು ಅಮೆರಿಕ ವಿಫಲವಾಗಿ ನಿರಂತರ ದುಷ್ಪರಿಣಾಮಗಳನ್ನು ಎದುರಿಸುತ್ತಿದೆ. ಬಿನ್ ಲಾಡೆನ್ ತಲೆತಪ್ಪಿಸಿಕೊಂಡಿದ್ದರಿಂದ ಆಫ್ಘಾನಿಸ್ತಾನ ಭಯೋತ್ಪಾದಕತೆ ಮರುಶಕ್ತಿ ಪಡೆಯಲು ಅಡಿಪಾಯ ಹಾಕಿತು ಮತ್ತು ಪಾಕಿಸ್ತಾನದಲ್ಲಿ ಆಂತರಿಕ ಕ್ಷೋಭೆಗೆ ಕಿಚ್ಚು ಹಚ್ಚಿತು ಎಂದು ವರದಿ ಹೇಳಿದೆ.

ಅಧ್ಯಕ್ಷ ಸೆನೆಟರ್ ಜಾನ್ ಕೆರಿ ಮನವಿ ಮೇಲೆ ಸೆನೆಟ್ ವಿದೇಶಾಂಗ ವ್ಯವಹಾರಗಳ ಸಮಿತಿಯ ಸಿಬ್ಬಂದಿ ಸದಸ್ಯರು ಈ ವರದಿ ಸಿದ್ಧಪಡಿಸಿದ್ದಾರೆ. ಅಲ್ ಖಾಯಿದಾ ನಾಯಕ ಸೆ.11, 2001ರ ಭಯೋತ್ಪಾದನೆ ದಾಳಿಗಳ ಬಳಿಕ ಪೂರ್ವ ಆಫ್ಘಾನಿಸ್ತಾನದ ಪರ್ವತ ಪ್ರದೇಶದಲ್ಲಿ ಅಡಗಿದ್ದಾಗ ಅವನನ್ನು ಸೆರೆಹಿಡಿಯುವ ಅಥವಾ ಹತ್ಯೆಮಾಡುವ ಸದವಕಾಶ ಇದರಿಂದಾಗಿ ತಪ್ಪಿಹೋಯಿತು ಎಂದು ವರದಿ ಹೇಳಿದೆ.

ಅಲ್ ಖಾಯಿದಾ ಮುಖಂಡನನ್ನು ಸಮರಕಣದಿಂದ ಸದೆಬಡಿಯುವ ಅವಕಾಶ 8 ವರ್ಷಗಳ ಕೆಳಗೆ ಯಶಸ್ವಿಯಾಗಿದ್ದರೆ,ವಿಶ್ವವ್ಯಾಪಿ ಭಯೋತ್ಪಾದನೆ ಬೆದರಿಕೆ ನಿವಾರಣೆಯಾಗುತ್ತಿರಲಿಲ್ಲ. ಆದರೆ, ಪಾಕಿಸ್ತಾನಕ್ಕೆ ಅವನು ತಪ್ಪಿಸಿಕೊಳ್ಳಲು ಅವಕಾಶ ನೀಡಿದ್ದರಿಂದ ಸಮರ್ಥ ಸಾಂಕೇತಿಕ ವ್ಯಕ್ತಿಯಾಗಿ ಹೊಮ್ಮಿ,ವಿಶ್ವಾದ್ಯಂತ ಧರ್ಮಾಂಧರಿಗೆ ಸ್ಫೂರ್ತಿ ನೀಡುತ್ತಿದ್ದು, ಭಯೋತ್ಪಾದನೆಗೆ ಸುಸ್ಥಿರ ಹಣದ ಹರಿವನ್ನು ಆಕರ್ಷಿಸಿದ್ದಾನೆಂದು ವರದಿ ಹೇಳಿದೆ.

ಬಿನ್ ಲಾಡೆನ್ ತೋರಾ ಬೋರಾದಲ್ಲಿ ಅಡಗಿದ್ದಾಗ, ಸಾವಿರಾರು ಪಡೆಗಳ ಜತೆ ತಕ್ಷಣವೇ ಪ್ರಹಾರ ನಡೆಸುವುದಕ್ಕೆ ಅವಕಾಶವಿತ್ತು. 2001ರ ಡಿ.16ರಂದು ಬಿನ್ ಲಾಡೆನ್ ಮತ್ತು ಅಂಗರಕ್ಷಕರು ಟೋರಾ ಬೋರಾದಿಂದ ಪಾಕಿಸ್ತಾನದ ಬುಡಕಟ್ಟು ಪ್ರದೇಶಕ್ಕೆ ಸುಲಭವಾಗಿ ತಪ್ಪಿಸಿಕೊಂಡರು ಎಂದು ವರದಿ ಹೇಳಿದೆ.

ಭಾರೀ ದಾಳಿ ನಡೆಸುವ ಬದಲಿಗೆ ಸುಮಾರು 100 ಕಮಾಂಡೊಗಳು ಆಫ್ಘನ್ ಖಾಸಗಿ ಸೇನೆ ಜತೆ ಸೇರಿ ವಾಯುದಾಳಿಗಳ ಮ‌ೂಲಕ ತಮ್ಮ ಬೇಟೆಯ ಜಾಡನ್ನು ಪತ್ತೆಹಚ್ಚಲು ಯತ್ನಿಸಿದರು. ಆದರೆ ಸ್ಮೈಪರ್ ತಂಡ ಸೇರಿ ನೌಕಾದಳ ಮತ್ತು ಸೇನೆಯನ್ನು ಬದಿಗಿರಿಸಿದ್ದು ದುಬಾರಿಯಾಗಿ ಪರಿಣಮಿಸಿತು ಎಂದು ವರದಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ