ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 8ವರ್ಷಗಳಲ್ಲಿ 700 ಉಗ್ರರನ್ನು ಕೊಂದಿದ್ದೇವೆ: ಪಾಕ್ (Pakistan | India | Talinban | Islamabad)
Bookmark and Share Feedback Print
 
ಅಲ್ ಖಾಯಿದಾ ವಿರುದ್ಧ ಪಾಕಿಸ್ತಾನ ಇನ್ನಷ್ಟು ತೀವ್ರ ಕ್ರಮಗಳನ್ನು ಕೈಗೊಂಡು ಒಸಾಮಾ ಬಿನ್ ಲಾಡೆನ್‌ನನ್ನು ಪತ್ತೆ ಮಾಡಬೇಕು ಎಂದು ತಾಕೀತು ಮಾಡಿರುವ ಬ್ರಿಟನ್ ಪ್ರಧಾನಿ ಬ್ರೌನ್ ಹೇಳಿಕೆಗೆ ಪಾಕ್ ತಿರುಗೇಟು ನೀಡಿದೆ.

ಭಯೋತ್ಪಾದನೆಯ ವಿರುದ್ಧ ತಾನು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಯಾರೂ ಅನುಮಾನ ವ್ಯಕ್ತಪಡಿಸಬಾರದು ಎಂದು ಪಾಕಿಸ್ತಾನ ಕಟುವಾಗಿ ನುಡಿದಿದೆ.

ಅಲ್ ಖಾಯಿದಾ ಮತ್ತಿತರ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ತನ್ನ ಪಾತ್ರ ನಿರ್ವಹಿಸಿದೆ. ಕಳೆದ ಎಂಟು ವರ್ಷಗಳಲ್ಲಿ 700ಕ್ಕೂ ಅಧಿಕ ಅಲ್ ಖಾಯಿದಾ ಉಗ್ರರನ್ನು ಕೊಂದಿದ್ದೇವೆ. ಇಲ್ಲವೇ ಸೆರೆ ಹಿಡಿದಿದ್ದೇವೆ. ಆ ನಿಟ್ಟಿನಲ್ಲಿ ಉಗ್ರರನ್ನು ಸದೆ ಬಡಿಯುವಲ್ಲಿ ಪಾಕ್ ಮೀನಮೇಷ ಎಣಿಸುತ್ತಿದೆ ಎಂದು ಅನಾವಶ್ಯಕವಾಗಿ ಗೂಬೆ ಕೂರಿಸಬಾರದು ಎಂದು ವಿದೇಶಾಂಗ ಖಾತೆ ವಕ್ತಾರ ಅಬ್ದುಲ್ ಬಸಿದ್ ತಿಳಿಸಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ಪಾಕಿಸ್ತಾನದ ಹೋರಾಟದ ಬಗ್ಗೆ ಇಡೀ ವಿಶ್ವ ಸಮುದಾಯವೇ ಮೆಚ್ಚುಗೆ ವ್ಯಕ್ತಪಡಿಸಿರುವಾಗಿ, ಬ್ರೌನ್ ಹೇಳಿಕೆ ಅಚ್ಚರಿ ಮೂಡಿಸುವಂತಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ