ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಾಯಭಾರಿ ಮಾತುಕತೆಯೊಂದಿಗೆ ವಿವಾದ ಇತ್ಯರ್ಥ: ಇರಾನ್ (Iran | Nuclear issue | Ali Larijani | Tehran)
Bookmark and Share Feedback Print
 
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿವಾದಕ್ಕೊಳಗಾಗಿರುವ ಇರಾನ್ ಪರಮಾಣು ವಿವಾದವನ್ನು ರಾಜತಾಂತ್ರಿಕ ಮಾತುಕತೆ ಮೂಲಕ ಈಗಲೂ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಪಾರ್ಲಿಮೆಂಟ್ ಸ್ಪೀಕರ್ ಅಲಿ ಲಾರಿಜಾನಿ ಸೋಮವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ತಾನು ಹತ್ತು ಹೊಸ ಯುರೇನಿಯಂ ಪ್ಲ್ಯಾಂಟ್ ಅನ್ನು ಅಭಿವೃದ್ಧಿಪಡಿಸುವುದಾಗಿ ತೆಹ್ರಾನ್ ಹೇಳಿಕೆ ನೀಡಿದ ಬೆನ್ನಲ್ಲೇ', ಇರಾನ್ ಸ್ಪೀಕರ್ ಈ ಹೇಳಿಕೆ ಹೊರಬಿದ್ದಿದೆ.

ಇರಾನ್ ಪರಮಾಣು ವಿವಾದವನ್ನು ರಾಯಭಾರಿಗಳ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಅವಕಾಶ ಇನ್ನೂ ಇದೆ. ಇದರ ಲಾಭವನ್ನು ಮುಂದುವರಿದ ರಾಷ್ಟ್ರಗಳು ಪಡೆಯಬಹುದಾಗಿದೆ ಎಂದಿರುವ ಅಲಿ, ಆ ನಿಟ್ಟಿನಲ್ಲಿ ಇರಾನ್ ಕೂಡ ಮಾತುಕತೆಯ ಷರತ್ತಿನಂತೆಯೇ ಕಾರ್ಯನಿರ್ವಹಿಸಲಿದೆ ಎಂದರು.

ಇರಾನ್ ನ್ಯೂಕ್ಲಿಯರ್ ಪವರ್ ಕಾರ್ಯಕ್ರಮ ಶಾಂತಿಯುತಗೊಳಿಸಲು ಈ ಮಾರ್ಗವೇ ಅತ್ಯಂತ ಸೂಕ್ತವಾದದ್ದು, ಹಾಗಾಗಿ ನಿರ್ಧಾರ ಕೈಗೊಳ್ಳಲು ಮುಂದುವರಿದ ರಾಷ್ಟ್ರಗಳಿಗೆ ಮುಕ್ತ ಅವಕಾಶವಿದೆ. ಇರಾನ್ ಸಹ ಅದರಂತೆಯೇ ನಡೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ