ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನ್ಯೂಜಿಲೆಂಡ್‌ನಿಂದ ಮೊದಲ ಬಾರಿಗೆ ರಾಕೆಟ್ ಉಡಾವಣೆ (New Zeeland | Rocket | Launch)
Bookmark and Share Feedback Print
 
ದ್ವೀಪದಿಂದ ಮೊದಲ ಬಾರಿಗೆ ಗಗನಕ್ಕೆ ರಾಕೆಟ್ ಉಡಾವಣೆ ಮಾಡಿದ ನ್ಯೂಜಿಲೆಂಡ್‌ಗೆ ಐತಿಹಾಸಿಕ ದಿನವಾಗಿದೆ. ಖಾಸಗಿ ಉಡಾವಣಾ ಸಂಸ್ಥೆ ಸ್ಪೇಸ್ ಕಂಪೆನಿ ರಾಕೆಟ್ ಲ್ಯಾಬ್ ಮೂಲಕ ಎಟಿ-1 ರಾಕೆಟ್ ಉಡಾವಣೆ ಮಾಡಲಾಗಿದೆ. ಇದು ದೇಶದಲ್ಲಿಯೇ ಮೊದಲ ಬಾರಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಗಗನಕ್ಕೆ ರಾಕೆಟ್ ಉಡಾವಣೆ ಮಾಡುವ ಗುರಿಯನ್ನು ಹೊತ್ತುಕೊಂಡ ರಾಕೆಟ್ ಲ್ಯಾಬ್ ಕಂಪೆನಿಯನ್ನು ಕಳೆದ ಮೂರು ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು. ಪ್ರಥಮ ಬಾರಿಗೆ ಉಡಾವಣೆ ಮಾಡಿದ ಎಟಿ-1 ರಾಕೆಟ್ ಕಡಿಮೆ (2ಕೆಜಿ) ಸಾಮರ್ಥ್ಯವನ್ನು ಹೊಂದಿದೆ ಎಂದು ಉಡ್ಡಯನ ಮೂಲಗಳು ತಿಳಿಸಿವೆ.

50 ಕೀ.ಮಿ ತಲುಪುವ ಗುರಿಯನ್ನು ಹೊಂದಿದ ರಾಕೆಟ್ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದರೂ ಮುಂದಿನ ಎರಡು ದಿನಗಳಲ್ಲಿ ನಿಚ್ಚಳ ಫಲಿತಾಂಶ ದೊರೆಯಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ರಾಕೆಟ್ ಉಡಾವಣೆಯನ್ನು ಆರಂಭದಲ್ಲಿ ಬೆಳಿಗ್ಗೆ 7.10ಗಂಟೆಗೆ ನಿಗದಿಪಡಿಸಲಾಗಿತ್ತು. ಆದರೆ ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ಉಡಾವಣೆ ವಿಳಂಬವಾಗಿ ಮಧ್ಯಾಹ್ನ 2.28ಗಂಟೆಗೆ ಗಗನಕ್ಕೆ ಹಾರಿ ಬಿಡಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನ್ಯೂಜಿಲೆಂಡ್, ರಾಕೆಟ್, ಉಡಾವಣೆ