ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಮಯ ಮೀರುತ್ತಿದೆ:ಇರಾನ್‌ಗೆ ಅಮೆರಿಕ ಎಚ್ಚರಿಕೆ (White House | Iran | Nuclear programme | Robert Gibbs)
Bookmark and Share Feedback Print
 
ಟೆಹರಾನ್ 10 ನೂತನ ಅಣುಉತ್ಪಾದಕ ಘಟಕಗಳ ಸ್ಥಾಪನೆಯನ್ನು ಘೋಷಿಸಿರುವುದು ಅಂತಾರಾಷ್ಟ್ರೀಯ ಅಣುನಿಯಮಗಳ ವಿರುದ್ಧವಾಗಿರುವುದರಿಂದ ಕೂಡಲೇ ಸ್ಥಗಿತಗೊಳಿಸಬೇಕು.ಸಮಯ ಮೀರಿಹೋಗುತ್ತಿದೆ ಎಂದು ವೈಟ್‌ಹೌಸ್ ಇರಾನ್‌ಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

ಇರಾನ್ ಅಣುಕಾರ್ಯಕ್ರಮಗಳನ್ನು ಮುಂದುವರಿಸಿರುವ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ ವೈಟ್‌ಹೌಸ್ ವಕ್ತಾರ ರೊಬರ್ಟ್ ಗಿಬ್ಸ್‌ ತಾಳ್ಮೆಯ ಸಮಯ ಮೀರುತ್ತಿದೆ ಎನ್ನುವುದು ಇರಾನ್‌ಗೆ ತಿಳಿದಿರಲಿ ಎಂದು ಕಿಡಿಕಾರಿದ್ದಾರೆ.

ನೂತನ ಅಣು ಉತ್ಪಾದಕ ಘಟಕಗಳನ್ನು ಸ್ಥಾಪಿಸುವುದು ಖಚಿತವಾದಲ್ಲಿ ವಿಶ್ವಸಂಸ್ಥೆಯ ನಿಯಮಗಳನುಸಾರ ಮತ್ತೊಂದು ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ ಎಂದು ಗಿಬ್ಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸಮುದಾಯ ಇರಾನ್‌ಗೆ ಅಣು ಕಾರ್ಯಕ್ರಮಗಳನ್ನು ಮುಂದುವರಿಸುವ ಹಕ್ಕಿದೆ. ಆದರೆ ಆ ಹಕ್ಕುಗಳು ಜವಾಬ್ದಾರಿಯುತವಾಗಿವೆ.ಅಣು ಕಾರ್ಯಕ್ರಮಗಳ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಕಳವಳಕ್ಕೆ ಉತ್ತರಿಸುವಲ್ಲಿ ಇರಾನ್ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಗಿಬ್ಸ್ ಕಳವಳ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ