ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸರಕಾರದ ಮುಖ್ಯಸ್ಥ ನಾನು, ಜರ್ದಾರಿಯಲ್ಲ:ಗಿಲಾನಿ (Pakistan | Gilani | Zardari)
Bookmark and Share Feedback Print
 
ದೇಶದಲ್ಲಿ ಸರಕಾರ ನಡೆಸುತ್ತಿರುವುದು ನಾನು ಹೊರತು ರಾಷ್ಟ್ರಾಧ್ಯಕ್ಷ ಆಸಿಫ್ ಅಲಿ ಜರ್ಧಾರಿಯಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಯುಸೂಫ್ ರಾಜಾ ಗಿಲಾನಿ ಹೇಳಿದ್ದಾರೆ.

ತಮಗಿರುವ ಪರಮಾಧಿಕಾರಿಗಳನ್ನು ಪ್ರಧಾನಿಗೆ ಹಸ್ತಾಂತರಿಸುವಂತೆ ರಾಷ್ಟ್ರಾಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರಿಗೆ ಒತ್ತಡಗಳು ಹೆಚ್ಚುತ್ತಿರುವಂತೆ ಒಂದೊಂದಾಗಿ ಅಧಿಕಾರಗಳನ್ನು ಪ್ರಧಾನಿ ಗಿಲಾನಿಯವರಿಗೆ ನೀಡಲು ಜರ್ದಾರಿ ಭಾರಿ ಒತ್ತಡವನ್ನು ಎದುರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾನು ಈ ಸರಕಾರದ ಮುಖ್ಯ ಕಾರ್ಯನಿರ್ವಾಹಕ ಮತ್ತು ಮುಖ್ಯ ಕಾರ್ಯನಿರ್ವಾಹಕರು ಸರಕಾರದ ಮುಖ್ಯಸ್ಥರಾಗಿರುತ್ತಾರೆ ಎಂದು ಪ್ರಧಾನಿ ಗಿಲಾನಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಜರ್ದಾರಿ ದೇಶದ ಮುಖ್ಯಸ್ಥರು ಮತ್ತು ನಾನು ಸರಕಾರದ ಮುಖ್ಯಸ್ಥ. ಸರಕಾರವನ್ನು ನಡೆಸುತ್ತಿರುವವರು ಯಾರು ಎನ್ನುವುದು ಕುಚ್ಯೋದ್ಯದ ಪ್ರಶ್ನೆಯಾಗಿದೆ. ತಮ್ಮ ಹಾಗೂ ಜರ್ದಾರಿಯ ಮಧ್ಯೆ ಭಿನ್ನಾಭಿಪ್ರಾಯಗಳಿವೆ ಎನ್ನುವುದನ್ನು ಗಿಲಾನಿ ತಳ್ಳಿಹಾಕಿದ್ದಾರೆ.

ದೇಶದ ಮೂಲ ಸಂವಿಧಾನದನ್ವಯ ಸಂಸದೀಯ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಪ್ರಧಾನಿ ಸರಕಾರದ ಮುಖ್ಯಸ್ಥರಾಗಿರುತ್ತಾರೆ. ರಾಷ್ಟ್ರಾಧ್ಯಕ್ಷ ಆಸಿಫ್ ಅಲಿ ಜರ್ದಾರಿ ದೇಶದ ಮುಖ್ಯಸ್ಥರಾಗಿರುತ್ತಾರೆ ಎಂದು ಗಿಲಾನಿ

ಆದರೆ, ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷ್ರಫ್, ಪ್ರಧಾನ ಮಂತ್ರಿಗಿರುವ ಬಹುತೇಕ ಅಧಿಕಾರಗಳನ್ನು ಕಾನೂನಿಗೆ ತಿದ್ದುಪಡಿ ತಂದು, ಅಧಿಕಾರಗಳನ್ನು ವರ್ಗಾಯಿಸಿಕೊಂಡು ಸುಮಾರು ಒಂಬತ್ತು ವರ್ಷಗಳ ಅವಧಿಯವರೆಗೆ ಪ್ರಧಾನಿಯನ್ನು ಅಶಕ್ತ ಪ್ರಧಾನಿಯಾಗಿಸುವಲ್ಲಿ ಯಶಸ್ವಿಯಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಾಕಿಸ್ತಾನ, ಗಿಲಾನಿ, ಜರ್ದಾರಿ