ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ಉಗ್ರರಿಗೆ ಕರಾಚಿ ಸುರಕ್ಷಿತ ತಾಣ (Taliban | Karachi | Hide)
Bookmark and Share Feedback Print
 
ಪಾಕಿಸ್ತಾನದಲ್ಲಿರುವ ಕರಾಚಿ ತಾಲಿಬಾನ್ ಉಗ್ರರಿಗೆ ಸುರಕ್ಷಿತ ಅಡಗುತಾಣವಾಗಿದೆ ಎಂದು ಮೂಲಗಳು ತಿಳಿಸಿವೆ.

ನ್ಯೂಸ್‌ವೀಕ್ ವರದಿಯ ಪ್ರಕಾರ, ಅಮೆರಿಕ ಅಫಘಾನಿಸ್ಥಾನಕ್ಕೆ ಹೆಚ್ಚುವರಿ ಸೇನಾಪಡೆಗಳನ್ನು ರವಾನಿಸಲು ಯೋಜನೆಯನ್ನು ರೂಪಿಸಿದೆ ಎನ್ನುವ ಆತಂಕದಿಂದಾಗಿ ಅಫಘಾನಿಸ್ಥಾನಕ್ಕೆ ಹೊಂದಿಕೊಂಡಿರುವ ಪಾಕಿಸ್ತಾನದ ಕರಾಚಿಗೆ ತಾಲಿಬಾನ್ ಉಗ್ರರು ತಮ್ಮ ಅಡಗುತಾಣವನ್ನು ಬದಲಿಸುತ್ತಿದ್ದಾರೆ ಎಂದು ಹಿರಿಯ ತಾಲಿಬಾನ್ ಕಮಾಂಡರ್ ಹೇಳಿಕೆ ನೀಡಿದ್ದಾರೆ.

ವರದಿಗಳ ಪ್ರಕಾರ, ತಾಲಿಬಾನ್ ಉಗ್ರರು ನಿಧಾನವಾಗಿ ಕೆಟ್ಟಾದಿಂದ ತಮ್ಮ ನೆಲೆಯನ್ನು ಕರಾಚಿಗೆ ವರ್ಗಾಯಿಸುವಲ್ಲಿ ನಿರತರಾಗಿದ್ದಾರೆ. ಬಹುತೇಕ ತಾಲಿಬಾನ್‌ ನಾಯಕರು ಕರಾಚಿಯಿಂದಲೇ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಲಿಬಾನ್ ನಾಯಕರು ಬಲೂಚಿಸ್ತಾನದಲ್ಲಿ ಅಡಗಿಕೊಂಡಿದ್ದು, ನಿಧಾನವಾಗಿ ವಾಣಿಜ್ಯ ರಾಜಧಾನಿಯಾದ ಕರಾಚಿಗೆ ನುಸುಳುತ್ತಿದ್ದಾರೆ. ಕರಾಚಿಯಿಂದ ಕಾರ್ಯನಿರ್ವಹಿಸಿದಲ್ಲಿ ಅಮೆರಿಕದ ಕೆಂಗಣ್ಣಿನಿಂದ ಪಾರಾಗಬಹುದು ಹಾಗೂ ಮುಕ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಾಲಿಬಾನ್ ಕಮಾಂಡರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಆದಾಗ್ಯೂ, ತಾಲಿಬಾನ್ ಉಗ್ರರು ಕಳೆದ 2003 ರಿಂದ ಕರಾಚಿಯಲ್ಲಿ ಕುಟುಂಬವನ್ನು ಹೊಂದಿರುವ ಮುಲ್ಲಾ ಉಮರ್ ಸೇರಿದಂತೆ ತಮ್ಮ ಹಿರಿಯ ನಾಯಕರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕರಾಚಿಯಲ್ಲಿ ಹೆಚ್ಚಿನ ಜನಸಂಖ್ಯೆ ಪಾಷ್ತೂನ್ ಜನಾಂಗದವರಾಗಿದ್ದರಿಂದ ಪ್ರತ್ಯೇಕತಾವಾದಿಗಳಿಗೆ ತಮ್ಮ ನೆಲೆಯನ್ನು ಸ್ಥಾಪಿಸಲು ಯಾವುದೇ ರೀತಿಯ ಅಡ್ಡಿಯಿಲ್ಲವೆಂದು ತಾಲಿಬಾನ್‌ನ ಹಿರಿಯ ಮುಖಂಡ ಝಬಿಬುಲ್ಲಾ ಹೇಳಿಕೆಯನ್ನು ನ್ಯೂಸ್‌ವೀಕ್ ವರದಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತಾಲಿಬಾನ್, ಕರಾಚಿ, ಅಡಗುತಾಣ