ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಣುವಿವಾದ ಸಂಧಾನಗಳು ಅಂತ್ಯ:ಅಹ್ಮದಿನೇಜಾದ್ (Iran | Ahmadinejad | UN | Russia | nukes)
Bookmark and Share Feedback Print
 
ಅಂತಾರಾಷ್ಟ್ರೀಯ ಅಣುಶಕ್ತಿ ಆಯೋಗದ ಇತ್ತೀಚಿನ ನಿಯಮಗಳ ಮಧ್ಯೆಯು ಅಣು ವಿವಾದ ಕುರಿತಂತೆ ಹೆಚ್ಚಿನ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಅಧ್ಯಕ್ಷ ಮಹಮ್ಮೊದ್ ಅಹ್ಮದ್‌ದಿನೇಜಾದ್ ಹೇಳಿದ್ದಾರೆ.

ನಮ್ಮ ಮಟ್ಟಿಗೆ ಹೇಳುವದಾದಲ್ಲಿ ಇರಾನ್ ವಿವಾದ ಅಂತ್ಯಗೊಂಡಿದೆ. ಐಎಇಎಗೆ ಸಂಬಂಧಿಸಿದಂತೆ ಎಲ್ಲ ತಾಂತ್ರಿಕ ಒಪ್ಪಂದಗಳನ್ನು ಈಗಾಗಲೇ ಇತ್ಯರ್ಥಗೊಳಿಸಲಾಗಿದೆ ಮತ್ತು ಅಣುಕಾರ್ಯಕ್ರಮ ಕುರಿತಂತೆ ಇತರ ದೇಶಗಳೊಂದಿಗೆ ಮಾತುಕತೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಐಎಇಎ ನಿಯಮಗಳನ್ನು ನಾವು ಗೌರವಿಸುತ್ತೇವೆ. ಆದರೆ ಐಎಇಎ ಸಂಸ್ಥೆ ರಾಜಕೀಯ ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಿದೆ.ಐಎಇಎ ಅಂತಾರಾಷ್ಟ್ರೀಯ ಕಾನೂನುಗಳಿಗೆ ಸೀಮಿತ ಸಹಕಾರವನ್ನು ಹೊರತುಪಡಿಸಿ ಹೆಚ್ಚಿನದನ್ನು ನಿರೀಕ್ಷಿಸುವುದಿಲ್ಲ ಎಂದು ಅಹ್ಮದ್‌ದಿನೇಜಾದ್ ಸ್ಪಷ್ಟಪಡಿಸಿದ್ದಾರೆ.

ವಿಯನ್ನಾ ಮೂಲದ ಐಎಇಎ, ಇರಾನ್ ಟೆಹರಾನ್ ಬಳಿಯಿರುವ ಫೋರ್ದು ನಗರದಲ್ಲಿ ಅಣು ಉತ್ಪಾದಕ ಘಟಕವನ್ನು ರಹಸ್ಯವಾಗಿ ನಿರ್ಮಿಸುತ್ತಿದೆ ಎಂದು ಆರೋಪಿಸಿತ್ತು.

ಅಣುಶಕ್ತಿ ಸ್ಥಾವರನ್ನು ನಿರ್ಮಿಸಿದಲ್ಲಿ ಯಾವುದೇ ತೊಂದರೆಗಳಿಲ್ಲ. ಅಣು ತಂತ್ರಜ್ಞಾನ ದೇಶಿಯವಾಗಿದ್ದು, ವಿದೇಶಿಗಳಿಂದ ರವಾನೆಯಾಗಿಲ್ಲವಾದ್ದರಿಂದ ಅಂತಾರಾಷ್ಟ್ರೀಯ ಕಾನೂನನ್ನು ನಾವು ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇರಾನ್, ಅಹ್ಮದ್ದಿನೇಜಾದ್, ಐಎಇಎ