ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಲ್‌ಕೈದಾಗೆ ಪಾಕಿಸ್ತಾನ ಸುರಕ್ಷಿತ ತಾಣ:ಒಬಾಮಾ (Barack Obama, Terrorism, Al Qaeda , Afghanistan)
Bookmark and Share Feedback Print
 
ಅಫಘಾನಿಸ್ತಾನದಲ್ಲಿ ನ್ಯಾಟೋ ಮೈತ್ರಿ ಪಡೆಗಳಿಂದ ಸೋಲನುಭವಿಸಿದ ಅಲ್‌ಕೈದಾ ನಾಯಕರು ಪಾಕಿಸ್ತಾನವನ್ನು ಸುರಕ್ಷಿತ ಅಡಗುತಾಣವಾಗಿ ಸ್ಥಾಪಿಸಿಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ಕಳೆದ 2001-2002ರ ಸಾಲಿನಲ್ಲಿ ಅಫಘಾನ್ ಗಡಿಯನ್ನು ದಾಟಿ ಪಾಕಿಸ್ತಾನವನ್ನು ಪ್ರವೇಶಿಸಿದ ಅಲ್‌ಕೈದಾ ನಾಯಕರು ಸುರಕ್ಷಿತ ಸ್ಥಳವನ್ನು ಆಯ್ಕೆಮಾಡಿಕೊಂಡಿದ್ದಾರೆ ಎಂದು ನ್ಯೂಯಾರ್ಕ್‌ನಲ್ಲಿರುವ ವೆಸ್ಟ್‌ಪಾಯಿಂಟ್‌ ಮಿಲಿಟರಿ ಅಕಾಡೆಮಿಯಲ್ಲಿ ಅಫಘಾನ್ ನೀತಿಗಳು ಕುರಿತಂತೆ ಒಬಾಮಾ ಮಾತನಾಡಿದರು.

ಏತನ್ಮಧ್ಯೆ, ಅಫಘಾನಿಸ್ತಾನದ ನಾಗರಿಕರಿಂದ ಆಯ್ಕೆಯಾದ ಸರಕಾರ, ಭ್ರಷ್ಟಾಚಾರ, ಮಾದಕ ವಸ್ತುಗಳ ಮಾಫಿಯಾ ಮತ್ತು ಭಧ್ರತಾಪಡೆಗಳ ಕೊರತೆಯಿಂದ ಬಳಲುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಳೆದ ಕೆಲ ವರ್ಷಗಳಿಂದ ತಾಲಿಬಾನ್ ಮತ್ತು ಅಲ್‌ಕೈದಾ ಉಗ್ರರು ಸರಕಾರವನ್ನು ಉರುಳಿಸಿ ನಿಧಾನವಾಗಿ ಅಧಿಕಾರವನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.ಪಾಕಿಸ್ತಾನದಲ್ಲಿರುವ ಸ್ವಾತ್ ಕಣಿವೆಯನ್ನು ವಶಕ್ಕೆ ತೆಗೆದುಕೊಳ್ಳುವ ತಾಲಿಬಾನ್ ಉಗ್ರರ ಹವಣಿಕೆಯನ್ನು, ಒತ್ತಡದ ಹಿನ್ನೆಲೆಯಲ್ಲಿ ಪಾಕ್ ಸೇನೆ ಕಾರ್ಯಾಚರಣೆ ಆರಂಭಿಸಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ