ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನದಲ್ಲಿ ಮತ್ತೆ ಆತ್ಮಾಹುತಿ ಬಾಂಬರ್ ದಾಳಿ (Pakistan | Islamabad | Suicide attack | America | Obama)
Bookmark and Share Feedback Print
 
ಪಾಕಿಸ್ತಾನದಲ್ಲಿ ನೆಲೆಬಿಟ್ಟಿರುವ ಉಗ್ರರನ್ನು ಸಂಪೂರ್ಣವಾಗಿ ಮಟ್ಟಹಾಕಬೇಕೆಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ತಾಕೀತು ಮಾಡಿರುವ ಬೆನ್ನಲ್ಲೇ ಬುಧವಾರ ಇಸ್ಲಾಮಾಬಾದ್‌ನ ನಾವಲ್ ಕಾಂಪ್ಲೆಕ್ಸ್ ಬಳಿ ಆತ್ಮಹುತಿ ಬಾಂಬರ್ ದಾಳಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಮ್ಮನ್ನು ತಾವೇ ಸ್ಫೋಟಿಸಿಕೊಂಡ ಮಾನವ ಬಾಂಬರ್‌ಗಳಿಂದಾಗಿ ಓರ್ವ ಸಾವನ್ನಪ್ಪಿದ್ದು, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಬಾನಿ ಅಮಿನ್ ಹೇಳಿದ್ದಾರೆ. ಆದರೆ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ನಿಖರವಾಗಿ ತಿಳಿದು ಬಂದಿಲ್ಲ ಎಂದು ವಿವರಿಸಿದ್ದಾರೆ.

ಉಗ್ರರ ವಿರುದ್ಧ ಅಮೆರಿಕ ಹಾಗೂ ಪಾಕ್ ಸರ್ಕಾರ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕೆಂದು ತಾಲಿಬಾನ್ ಉಗ್ರರು ಎಚ್ಚರಿಕೆ ನೀಡಿದ್ದರು. ಪಾಕಿಸ್ತಾನ ಭದ್ರತಾ ಪಡೆಯ ಕಾರ್ಯಾಚರಣೆಯ ನಡುವೆಯೇ ಉಗ್ರರ ಅಟ್ಟಹಾಸ ನಿರಂತರವಾಗಿ ಮುಂದುವರಿದಿದೆ.
ಸಂಬಂಧಿತ ಮಾಹಿತಿ ಹುಡುಕಿ