ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗುಲಾಬಿ ಬಣ್ಣದ ವಜ್ರ 54ಕೋಟಿ ರೂ.ಗೆ ಹರಾಜು! (Hong Kong | diamond | Vivid Pink | London)
Bookmark and Share Feedback Print
 
ತುಂಬಾ ಅಪರೂಪದ ಪುರಾತನ 5ಕ್ಯಾರಟ್‌ನ ಗುಲಾಬಿ ಬಣ್ಣದ ವಜ್ರ, ಸುಮಾರು 54ಕೋಟಿ ರೂಪಾಯಿಗೆ ಬುಧವಾರ ಹರಾಜಾಗಿ ದಾಖಲೆ ನಿರ್ಮಿಸಿದೆ.

ಇಲ್ಲಿನ ಹರಾಜು ಮಾರುಕಟ್ಟೆಯಲ್ಲಿ ನಡೆದ ಜಾಗತಿಕ ಹರಾಜಿನಲ್ಲಿ ಅತ್ಯಂತ ಶೋಭಾಯಮಾನವಾದ ಗುಲಾಬಿ ವರ್ಣದ ವಜ್ರದ ಹರಳು 54ಕೋಟಿ ರೂಪಾಯಿಗೆ(10.8ದಶಲಕ್ಷ ಡಾಲರ್‌)ಗೆ ಮಾರಾಟವಾಗುವ ಮೂಲಕ ಈ ಹಿಂದಿನ ದಾಖಲೆಯನ್ನು ಸರಿದೂಗಿಸಿದೆ.

ಜಾಗತಿಕವಾಗಿ ವಜ್ರದ ಹರಳು ಈ ಹಿಂದೆಂದೂ ಇಷ್ಟೊಂದು ಬೆಲೆಗೆ ಮಾರಾಟವಾಗಿಲ್ಲ. 15ವರ್ಷದ ಹಿಂದೆ ಜಿನಿವಾದಲ್ಲಿ 19.66ಕ್ಯಾರಟ್‌ನ ವಜ್ರದ ಹರಳು 7.4ದಶಲಕ್ಷ ಡಾಲರ್‌ಗೆ ಮಾರಾಟವಾಗಿತ್ತು ಎಂದು ಹರಳು ಮಾರಾಟಗಾರ ಕ್ರಿಸ್ಟಿ ಹೇಳಿದ್ದಾರೆ.

ಗುಲಾಬಿ ವರ್ಣದ ಈ ಶೋಭಾಯಮಾನವಾದ ಈ ವಜ್ರದ ಹರಳು 10.8ದಶಲಕ್ಷ ಡಾಲರ್‌ಗೆ ಮಾರಾಟವಾಗುವ ಮೂಲಕ ಆರ್ಥಿಕ ಕುಸಿತದಿಂದ ಕಂಗೆಟ್ಟಿದ್ದ ಅಪರೂಪದ ಪುರಾತನ ಹರಳೊಂದು ಹರಾಜಾದಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ