ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನಿಸ್ತಾನಕ್ಕೆ ಮತ್ತೆ 30ಸಾವಿರ ಸೈನಿಕ ಪಡೆ: ಒಬಾಮಾ (al Qaeda | Afghanistan | Obama | US Military | extremism)
Bookmark and Share Feedback Print
 
ಅಫ್ಘಾನಿಸ್ತಾನದಲ್ಲಿ ಉಗ್ರರನ್ನು ಸಂಪೂರ್ಣವಾಗಿ ಮಟ್ಟಹಾಕಲು ಪಣತೊಟ್ಟಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು, ಮತ್ತೆ 30ಸಾವಿರಕ್ಕೂ ಅಧಿಕ ಸೈನಿಕರನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲು ಮಂಗಳವಾರ ತಡರಾತ್ರಿ ನಿರ್ಧರಿಸಿದ್ದಾರೆ.

ಅಲ್ಲದೇ, ಅಫ್ಘಾನಿಸ್ತಾನ ಸರ್ಕಾರ ದೇಶದ ಜನರಿಗೆ ರಕ್ಷಣೆ ನೀಡುವತ್ತ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಆದರೆ ಉಗ್ರರನ್ನು ಸದೆಬಡಿಯುವಲ್ಲಿ ನಾವು ಯಾವುದೇ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಅಫ್ಘಾನಿಸ್ತಾನವನ್ನು ಮತ್ತೊಂದು ವಿಯೆಟ್ನಾಂ ಮಾಡಲು ಹೊರಟಿದೆ ಎಂಬ ಆರೋಪ ತಪ್ಪು ಗ್ರಹಿಕೆಯಿಂದ ಕೂಡಿದೆ ಎಂದಿರುವ ಒಬಾಮಾ, ಅಫ್ಘಾನಿಸ್ತಾನವನ್ನು ಮತ್ತೊಂದು ವಿಯೆಟ್ನಾಂ ಆಗುವುದಿಲ್ಲ ಎಂದಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಅಲ್ ಖಾಯಿದಾ ಮತ್ತು ತಾಲಿಬಾನ್ ಉಗ್ರರನ್ನು ಸದೆಬಡಿಯುವಲ್ಲಿ ಮಿಲಿಟರಿ ಪಡೆ ಸಕ್ರಿಯವಾಗಿದೆ. ಏನೇ ಆದರೂ ಅಫ್ಘಾನ್ ಸರ್ಕಾರದ ನೆರವಿನೊಂದಿಗೆ ಉಗ್ರರನ್ನು ಮಟ್ಟಹಾಕದೇ ವಿರಮಿಸುವುದಿಲ್ಲ ಎಂದು ತಿಳಿಸಿದರು.

ಆಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಪಡೆಗಳು ಇರುವುದರಿಂದ ತಾಲಿಬಾನ್ ನಾಯಕರು ಪಾಕಿಸ್ತಾನದತ್ತ ಮುಖಮಾಡಿದ್ದು, ಅದು ಅವರಿಗೆ ಸುರಕ್ಷಿತ ಸ್ವರ್ಗವಾಗಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ