ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ, ಚೀನಾದಿಂದ ವಾಯುಗಡಿ ಉಲ್ಲಂಘನೆ:ಆಂಟನಿ (China | Pakistan | India | Pak | Violation | Airspace)
Bookmark and Share Feedback Print
 
ಕಳೆದ ಒಂದು ವರ್ಷದ ಅವಧಿಯಲ್ಲಿ ಪಾಕಿಸ್ತಾನ, ಚೀನಾ ಮತ್ತು ಅಮೆರಿಕ ರಾಷ್ಟ್ರಗಳ ವಿಮಾನಗಳು ಹೆಲಿಕಾಪ್ಟರ್ ಮತ್ತು ಯುಎವಿ(ಮಾನವರಹಿತ) ವಿಮಾನಗಳು ಭಾರತದ ಗಡಿಯನ್ನು 11 ಬಾರಿ ಅನಧಿಕೃತವಾಗಿ ಪ್ರವೇಶಿಸಿ ನಿಯಮಗಳನ್ನು ಉಲ್ಲಂಘಿಸಿವೆ ಎಂದು ಸರಕಾರ ಘೋಷಿಸಿದೆ.

ಆರು ಪ್ರತ್ಯೇಕ ಘಟನೆಗಳಲ್ಲಿ ಮಾನವರಹಿತ ವಿಮಾನಗಳು ಮತ್ತು ಪಾಕಿಸ್ತಾನದ ಮಧ್ಯಮಗಾತ್ರದ ಹೆಲಿಕಾಪ್ಟರ್‌ಗಳು ಭಾರತದ ವಾಯುಗಡಿಯನ್ನು ಉಲ್ಲಂಘಿಸಿವೆ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ಎ.ಕೆ. ಆಂಟನಿ ರಾಜ್ಯಸಭೆಗೆ ತಿಳಿಸಿದ್ದಾರೆ.

ಪಾಕಿಸ್ತಾನ ಕಳೆದ 2006 ರಿಂದ 43 ಬಾರಿ ವಾಯುಗಡಿಯನ್ನು ಉಲ್ಲಂಘಿಸಿದೆ. ಹಲವಾರು ಬಾರಿ ಭೂ ಸೇನೆ ಕೂಡಾ ಅಂತಾರಾಷ್ಟ್ರೀಯ ಲೈನ್ ಆಫ್ ಕಂಟ್ರೋಲ್ ಗಡಿಯನ್ನು ಅನಧಿಕೃತವಾಗಿ ಪ್ರವೇಶಿಸಿದೆ ಎಂದು ಆಂಟನಿ ಹೇಳಿದ್ದಾರೆ.

ಚೀನಾ ದೇಶ ಭಾರತದ ವಾಯುಗಡಿಯನ್ನು ಮೂರು ಬಾರಿ ಉಲ್ಲಂಘಿಸಿದೆ.ಏತನ್ಮಧ್ಯೆ, ಕಳೆದ ಜೂನ್ 21 ಮತ್ತು ಜೂನ್ 24 ರಂದು ಎರಡು ಹೆಲಿಕಾಪ್ಟರ್‌ಗಳು ಲಡಾಖ್‌ ಪ್ರದೇಶವನ್ನು ಅನಧಿಕೃತವಾಗಿ ಪ್ರವೇಶಿಸಿವೆ. ಮತ್ತೊಂದು ಚೀನಾ ವಿಮಾನ ಮೇ 13 ರಂದು ಭಾರತದ ಗಡಿಯನ್ನು ಪ್ರವೇಶಿಸಿದೆ ಎಂದು ಸಚಿವ ಆಂಟನಿ ರಾಜ್ಯಸಭೆಗೆ ವಿವರಣೆ ನೀಡಿದ್ದಾರೆ.

ಅಮೆರಿಕದ ಸರಕು ಸಾಗಾಣೆಯ ಕಾರ್ಗೊ ವಿಮಾನ ಕೂಡಾ ಜೂನ್ ಮತ್ತು ಅಕ್ಟೋಬರ್ ತಿಂಗಳಲ್ಲಿ ವಾಯುಗಡಿಯನ್ನು ಉಲ್ಲಂಘಿಸಿದೆ ಎಂದು ಕೇಂದ್ರ ಸಚಿವ ಆಂಟನಿ ರಾಜ್ಯಸಭೆಗೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ