ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ: ಪುಟಿನ್ (Russia | Terror attack | Vladimir Putin)
Bookmark and Share Feedback Print
 
ಕಳೆದ ವಾರ ರೈಲಿನಲ್ಲಿ ನಡೆದ ಬಾಂಬ್‌ಸ್ಫೋಟದ ಹಿನ್ನೆಲೆಯಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಸರಕಾರ ಮುಂದುವರಿಸಲಿದೆ ಎಂದು ರಷ್ಯಾದ ಪ್ರಧಾನಿ ವ್ಲಾಡಿಮೀರ್ ಪುಟಿನ್ ಹೇಳಿದ್ದಾರೆ.

ಸರಕಾರಿ ಸ್ವಾಮ್ಯದ ಟೆಲಿವಿಜನ್‌ಗೆ ನೀಡಿದ ಪ್ರಶ್ನೋತ್ತರ ಅಧಿವೇಶನದಲ್ಲಿ ಮಾತನಾಡಿದ ಪುಟಿನ್,ತಾವು ರಷ್ಯಾದ ರಾಜಕೀಯದಲ್ಲಿ ರಾಷ್ಟ್ರಾಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಅವರಿಗಿಂತ ತಾವು ಪ್ರಬಲ ಎನ್ನುವ ಸಂದೇಶವನ್ನು ರವಾನಿಸಿದರು.

ರಷ್ಯಾ ಆರ್ಥಿಕ ಬಿಕ್ಕಟ್ಟಿನಿಂದ ಹೊರಬಂದಿದ್ದು,ಜನಸಂಖ್ಯೆ ಹಾಗೂ ಆರ್ಥಿಕತೆಯ ಮೇಲೆ ಬೀರುತ್ತಿರುವ ಆರ್ಥಿಕತೆಯನ್ನು ನಿಭಾಯಿಸಿರುವುದಾಗಿ ಪುಟಿನ್ ತಿಳಿಸಿದ್ದಾರೆ.

ಪುಟಿನ್ ಮುಂಬರುವ 2012ರಲ್ಲಿ ನಡೆಯಲಿರುವ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ರಷ್ಯಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಯಾಗಲಿದ್ದಾರೆ ಎನ್ನುವ ಸಂದೇಶಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ