ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಫ್ಘಾನಿಸ್ತಾನ್‌ಗೆ ಹೆಚ್ಚುವರಿ ಸೇನಾಪಡೆ:ಒಬಾಮಾ (Afghanistan | Barak obama | Pakistan | America)
Bookmark and Share Feedback Print
 
ಪಾಕಿಸ್ತಾನದ ಅಣ್ವಸ್ತ್ರಗಳು ಅಲ್ ಖೈದಾ ಉಗ್ರರ ವಶವಾಗಬಹುದೆಂಬ ಭೀತಿ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನೂತನ ಆಫ್ಘಾನಿಸ್ತಾನ- ಪಾಕಿಸ್ತಾನ ನೀತಿ ಪ್ರಕಟಿಸಿದ್ದು, ಇನ್ನೂ 30,000 ಯೋಧರನ್ನು ಆಫ್ಘಾನ್‌ಗೆ ಕಳುಹಿಸುವುದಾಗಿ ಘೋಷಿಸಿದ್ದಾರೆ.

ಇದೇ ವೇಳೆ, 18 ತಿಂಗಳ ನಂತರ ಆಘ್ಘಾನಿಸ್ತಾನದಿಂದ ಸೇನಾ ತೆರವು ಪ್ರಕ್ರಿಯೆಗೆ ಚಾಲನೆ ನೀಡಲು ಅವರು ನಿರ್ಧರಿಸಿದ್ದು, ಈ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.

ಈ ಎರಡು ರಾಷ್ಟ್ರಗಳಿಂದ ಅಮೆರಿಕದ ಸುರಕ್ಷತೆಗೆ ಅಪಾಯವಿದೆ ಎಂದ ಅವರು, ‘ರಾಷ್ಟ್ರದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಹೆಚ್ಚುವರಿ 30,000 ಯೋಧರನ್ನು ಕಳುಹಿಸಲಾಗುತ್ತಿದೆ; 18 ತಿಂಗಳ ನಂತರ ಯೋಧರು ಸ್ವದೇಶಕ್ಕೆ ವಾಪಸಾಗುವ ಪ್ರಕ್ರಿಯೆ ಆರಂಭವಾಗುತ್ತದೆ’ ಎಂದರು.

ಮಂಗಳವಾರ ನೂತನ ನೀತಿ ಪ್ರಕಟಿಸಿದ ನಂತರ ನ್ಯೂಯಾರ್ಕ್‌ನ ವೆಸ್ಟ್ ಪಾಯಿಂಟ್ ಮಿಲಿಟರಿ ಅಕಾಡೆಮಿಯಲ್ಲಿ ಮಾತನಾಡಿದ ಅವರು, ‘2010ರ ಮೊದಲ ಆರು ತಿಂಗಳಲ್ಲಿ ಹೆಚ್ಚುವರಿ ಯೋಧರನ್ನು ಅಲ್ಲಿಗೆ ನಿಯೋಜಿಸಲಾಗುತ್ತದೆ. ಇದರಿಂದಾಗಿ ಆಘ್ಘಾನಿಸ್ತಾನದಲ್ಲಿನ ಅಮೆರಿಕ ಯೋಧರ ಸಂಖ್ಯೆ 98,000ಕ್ಕೆ ಏರಲಿದೆ’ ಎಂದರು
ಸಂಬಂಧಿತ ಮಾಹಿತಿ ಹುಡುಕಿ