ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನಕ್ಕೆ ತಾಣ ವರ್ಗಾಯಿಸುವ ಅಗತ್ಯವಿಲ್ಲ:ತಾಲಿಬಾನ್ (Afghan | Taliban | Pakistan | Barack Obama)
Bookmark and Share Feedback Print
 
ತಾಲಿಬಾನ್ ಅಫ್ಘಾನಿಸ್ತಾನ್‌ದಿಂದ ನೆಲೆಯನ್ನು ಪಾಕಿಸ್ತಾನಕ್ಕೆ ವರ್ಗಾಯಿಸುತ್ತಿದೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದ ತಾಲಿಬಾನ್ ಮುಖಂಡರು, ಪ್ರಬಲ ದಾಳಿಯನ್ನು ಎದುರಿಸಲು ವಿಫಲವಾಗಿ ಇಂತಹ ಹುಸಿ ಪ್ರಚಾರ ಮಾಡಲಾಗುತ್ತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಪಾಕಿಸ್ತಾನಕ್ಕೆ ತಾಣವನ್ನು ವರ್ಗಾಯಿಸುತ್ತಿಲ್ಲ. ಅಥವಾ ವರ್ಗಾಯಿಸುವ ಅಗತ್ಯವೂ ಇಲ್ಲ.ಅಫ್ಘಾನಿಸ್ತಾನದ ವಿಸ್ತಾರವಾದ ಪ್ರದೇಶದಲ್ಲಿ ನಿಯಂತ್ರಣ ಹೊಂದಿರುವ ತಾಲಿಬಾನ್ ಕಾರ್ಯಾಚರಣೆಯನ್ನು ಮುಂದುವರಿಸಲಿದೆ ಎಂದು ತಾಲಿಬಾನ್ ಉಗ್ರರು ಹೇಳಿದ್ದಾರೆ.

ಅಮೆರಿಕದ ಸೇನಾ ವಿಭಾಗ, ತಾಲಿಬಾನ್ ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ 11 ಪ್ರಾಂತ್ಯಗಳಲ್ಲಿ ನಿಯಂತ್ರಣ ಹೊಂದಿದೆ ಎಂದು ಹೇಳಿಕೆ ನೀಡಿತ್ತು. ಆದರೆ ಇತರ ಸೇನಾ ತಜ್ಞರ ಪ್ರಕಾರ ತಾಲಿಬಾನ್, ಅಫ್ಘಾನಿಸ್ತಾನದ ಶೇ.72 ರಷ್ಟು ಪ್ರಾಂತ್ಯಗಳಲ್ಲಿ ನಿಯಂತ್ರಣ ಹೊಂದಿದೆ ಎಂದು ಭಿನ್ನ ಹೇಳಿಕೆಯನ್ನು ನೀಡಿದ್ದಾರೆ.

ದೇಶದಲ್ಲಿ ವಿನಾಶವನ್ನು ಸೃಷ್ಟಿಸುವುದು ನಮ್ಮ ಕಾರ್ಯಾಚರಣೆಯ ಗುರಿಯಲ್ಲ.ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೆಚ್ಚುವರಿಯಾಗಿ 30 ಸಾವಿರ ಸೈನಿಕರನ್ನು ಕಳುಹಿಸುವುದರಿಂದ ಸಮಸ್ಯೆಗೆ ಪರಿಹಾರ ದೊರೆತಂತಾಗುವದಿಲ್ಲ ಎಂದು ತಾಲಿಬಾನ್ ಮುಖಂಡರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ