ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ ನಂ1 ಶತ್ರುವೆಂದು ಪಾಕ್ ಪರಿಗಣಿಸುತ್ತದೆ:ಕ್ಲಿಂಟನ್ (Clinton | Pakistan | India | Terrorism)
Bookmark and Share Feedback Print
 
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಹೆಚ್ಚುತ್ತಿರುವ ಉಗ್ರರು ದಾಳಿಗಳ ಮಧ್ಯೆಯು, ಭಾರತವನ್ನು ದೇಶದ ನಂಬರ್ ಒನ್ ಶತ್ರುವೆಂದು ಪಾಕಿಸ್ತಾನ ಭಾವಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲೆರಿ ಕ್ಲಿಂಟನ್ ಹೇಳಿದ್ದಾರೆ.

ಸಾರ್ವಭೌಮತೆಯನ್ನು ಹೊಂದಿರುವ ರಾಷ್ಟ್ರದೊಂದಿಗೆ ನಾವು ವ್ಯವಹರಿಸುತ್ತಿದ್ದೇವೆ. ಪಾಕಿಸ್ತಾನಕ್ಕೆ ತಮ್ಮ ಶತ್ರು ಯಾರು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯಿರುತ್ತದೆ. ಆದರೆ ಪಾಕಿಸ್ತಾನದೊಳಗಡೆ ನಡೆಯುತ್ತಿರುವ ಉಗ್ರರ ಚಟುವಟಿಕೆಗಳನ್ನು ಹತ್ತಿಕ್ಕುವುದಕ್ಕೆ ಅಲ್ಲಿನ ಸರಕಾರ ಮೊದಲ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ಕ್ಲಿಂಟನ್ ಅಮೆರಿಕದ ಸಂಸದೀಯ ಸಭೆಗೆ ತಿಳಿಸಿದ್ದಾರೆ.

ಯಾವುದೇ ದೇಶದ ಭಯೋತ್ಪಾಕರ ನಡುವೆ ವ್ಯತ್ಯಾಸವಿರುವದಿಲ್ಲ ಎಂದು ಅಮೆರಿಕ ಸ್ಪಷ್ಟವಾಗಿ ಪಾಕಿಸ್ತಾನಕ್ಕೆ ಹೇಳಿದೆ ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಹಿಲೆರಿ ಕ್ಲಿಂಟನ್ ತಿಳಿಸಿದ್ದಾರೆ.

ಸ್ವಾತ ಕಣಿವೆ ಮತ್ತು ವಜೀರಿಸ್ತಾನ್‌‌ನಲ್ಲಿ ಪಾಕಿಸ್ತಾನದ ಸೇನಾಕಾರ್ಯಾಚರಣೆಯನ್ನು ಶ್ವಾಘಿಸಿದ ಕ್ಲಿಂಟನ್, ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿಸಬೇಕೆಂದು ಪಾಕಿಸ್ತಾನಕ್ಕೆ ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ