ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಮಸೀದಿಯ ಮೇಲೆ ಉಗ್ರರ ದಾಳಿ: 39 ಮಂದಿ ಬಲಿ (Bomb Blast | Rawalpindi | Pakistan)
Bookmark and Share Feedback Print
 
ಪಾಕಿಸ್ತಾನದ ಸೇನಾನೆಲೆಯ ಬಳಿಯಿರುವ ಮಸೀದಿಯ ಮೇಲೆ ದಾಳಿ ನಡೆಸಿದ ಶಂಕಿತ ಉಗ್ರರ ದಾಳಿಗೆ 39 ಮಂದಿ ಬಲಿಯಾಗಿದ್ದಾರೆ ಎಂದು ಸೇನಾವಕ್ತಾರರು ತಿಳಿಸಿದ್ದಾರೆ.

ಮಸೀದಿಯೊಳಗಡೆ ಸ್ಫೋಟಗಳು ಹಾಗೂ ಗುಂಡಿನ ದಾಳಿ ನಡೆಯುತ್ತಿರುವುದರಿಂದ ಉಗ್ರರ ನಿಖರವಾದ ಸಂಖ್ಯೆ ಹಾಗೂ ಗಾಯಾಳುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲವೆಂದು ಸೇನಾಪಡೆಯ ಮೇಜರ್ ಜನರಲ್ ಅತ್ತರ್ ಅಬ್ಬಾಸ್ ತಿಳಿಸಿದ್ದಾರೆ.

ಪಾಕಿಸ್ತಾನದ ಸೇನಾನೆಲೆಯ ಬಳಿಯಿರುವ ಮಸೀದಿಯಲ್ಲಿ ಉಗ್ರರು ನಡೆಸಿದ ದಾಳಿಗೆ ಕನಿಷ್ಟ 15 ಮಂದಿ ಬಲಿಯಾಗಿದ್ದಾರೆ ಎಂದು ಟೆಲಿವಿಜನ್ ಚಾನೆಲ್‌ಗಳು ವರದಿ ಮಾಡಿವೆ.

ಅಕ್ಟೋಬರ್ ತಿಂಗಳಿನಿಂದ ದಕ್ಷಿಣ ವಜೀರಿಸ್ತಾನ್‌ನಲ್ಲಿ ತಾಲಿಬಾನ್ ವಿರುದ್ಧ ಭಾರಿ ಪ್ರಮಾಣದ ಸೇನಾಕಾರ್ಯಾಚರಣೆಯನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಉಗ್ರರು ಸರಣಿ ಬಾಂಬ್‌ ಸ್ಫೋಟಗಳನ್ನು ನಡೆಸಿ ಅಕ್ಟೋಬರ್ ತಿಂಗಳಿನಿಂದ ನೂರಾರು ಜನರನ್ನು ಹತ್ಯೆಗೈದಿದ್ದಾರೆ. ಶಂಕಿತ ಉಗ್ರರು ಸೇನಾ ಸಮವಸ್ತ್ರವನ್ನು ಧರಿಸಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ.

ಪಾಕಿಸ್ತಾನದ ಗಡಿಯನ್ನು ಸುರಕ್ಷಿತ ತಾಣವಾಗಿಸಿಕೊಂಡಿರುವ ಉಗ್ರರ ವಿರುದ್ಧ ಸೇನಾಕಾರ್ಯಾಚರಣೆಯನ್ನು ಆರಂಭಿಸುವಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಪಾಕಿಸ್ತಾನಕ್ಕೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಉಗ್ರರು ಮತ್ತಷ್ಟು ದಾಳಿಗಳನ್ನು ಮುಂದುವರಿಸಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ