ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಟಿಬೆಟ್‌ಗೆ ಮರಳುವ ವಿಶ್ವಾಸವಿದೆ: ದಲೈಲಾಮಾ (Tibet | Book | Return | Dalai Lama)
Bookmark and Share Feedback Print
 
ಟಿಬೆಟ್‌ನ ದೇಶಭ್ರಷ್ಟ ಧಾರ್ಮಿಕ ಗುರು ದಲೈಲಾಮಾ ತಮ್ಮ ಜೀವಿತಾವಧಿಯಲ್ಲಿ ಟಿಬೆಟ್‌ಗೆ ಮರಳುವುದಾಗಿ ಮತ್ತು ತಾವು ಮೃತರಾದ ನಂತರ ಹಲವಾರು ಬಾರಿ ಪುನರ್‌ಜನ್ಮ ತಾಳುವದಾಗಿ ಹೇಳಿಕೆ ನೀಡಿದ್ದಾರೆ ಎಂದು ಶುಕ್ರವಾರದಂದು ಬಿಡುಗಡೆಗೊಳಿಸಿದ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

ತೈವಾನ ಚಿತ್ರನಿರ್ದೇಶಕ ಲಿಯಾವೊ ವೆನ್-ಯು ದಲೈ ಲಾಮಾ ಕುರಿತು ಬರೆದ "ಓಲ್ಡೆಸ್ಟ್ ಲಾಫರ್ ಇನ್‌ ದಿ ಹಿಮಾಲಯ" ಎನ್ನುವ ಪುಸ್ತಕದಲ್ಲಿ ದಲೈಲಾಮಾ ಅವರ ಹೇಳಿಕೆಯನ್ನು ಪ್ರಕಟಿಸಲಾಗಿದೆ. ಚೀನಾದಲ್ಲಿ ಪರಿಸ್ಥಿತಿ ಬದಲಾವಣೆಯಾದಾಗ ಅಲ್ಲಿನ ನಾಯಕರು ಮುಕ್ತಮನಸ್ಸು ಹೊಂದಿದಾಗ ತಾವು ಟಿಬೆಟ್‌ಗೆ ಮರಳಲು ಸಾಧ್ಯವಾಗುತ್ತದೆ.

ದಲೈಲಾಮಾ ಅವರ ಟಿಬೆಟಿಯನ್ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ ಕುರಿತಂತೆ ಸಾಕ್ಷಾಚಿತ್ರದ ಶೂಟಿಂಗ್ ನಡೆಸುತ್ತಿರುವ ಸಮಯದಲ್ಲಿ ಲಿಯಾವೊ ವೆನ್-ಯು ಪುಸ್ತಕವನ್ನು ಬರೆದಿದ್ದಾರೆ.

ಸಾಕ್ಷಾಚಿತ್ರಕ್ಕೆ ಪುಸ್ತಕದ ಹೆಸರನ್ನು ಇಡಲಾಗಿದ್ದು, ಜನೆವರಿ 3 ರಂದು ಬಿಡುಗಡೆಯಾಗಲಿರುವ ಸಮಾರಂಭದಲ್ಲಿ ಹಾಜರಿರುವಂತೆ ದಲೈಲಾಮಾ ಅವರಿಗೆ ಅಹ್ವಾನ ನೀಡಿದ್ದಾರೆ.

ತೈವಾನ್‌ಗೆ ಭೇಟಿ ನೀಡಲು ಸದಾ ಸಿದ್ಧನಿದ್ದೇನೆ. ಆದರೆ ಅಲ್ಲಿನ ಸರಕಾರ ಅನುಮತಿ ಸೇರಿದಂತೆ ಹಲವು ವಿಷಯಗಳ ಮೇಲೆ ಅವಲಂಬಿಸಿದೆ ಎಂದು ದಲೈಲಾಮಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟಿಬೆಟ್ ಬುಕ್, ದಲೈಲಾಮಾ, ತೈವಾನ್