ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾಕ್‌ನಂತೆ ಅಫ್ಘಾನ್‌ನಿಂದ ಸೇನೆ ವಾಪಸ್: ಅಮೆರಿಕ (Afganistan | Iraq ,| America | Barak obama)
Bookmark and Share Feedback Print
 
ಆಫ್ಘಾನಿಸ್ತಾನದ ಸೇನೆಗೆ ದೇಶ ರಕ್ಷಣೆಯ ಹೊಣೆ ವಹಿಸಿ ಅಮೆರಿಕ ಸೇನೆ ಹಂತ, ಹಂತವಾಗಿ ಕಾಲ್ತೆಗೆಯಲಿದೆ ಎಂದು ಅಮೆರಿಕ ತಿಳಿಸಿದೆ.

ಜುಲೈ 2011ರ ಹೊತ್ತಿಗೆ ನಮ್ಮ ಸೇನೆ ಅಲ್ಲಿಂದ ನಿಧಾನವಾಗಿ ಕಾಲ್ತೆಗೆಯಬೇಕು, ಆಫ್ಘಾನಿಸ್ತಾನದ ಕೆಲ ಪ್ರಾಂತ್ಯಗಳಲ್ಲಿ ಭದ್ರತೆಯ ಹೊಣೆಯನ್ನು ಅಲ್ಲಿನ ಸೇನೆಗೆ ವಹಿಸಬೇಕು ಎಂಬುದು ಅಧ್ಯಕ್ಷ ಬರಾಕ್ ಒಬಾಮ ಅವರ ಇಚ್ಛೆಯಾಗಿದೆ ಎಂದು ಶ್ವೇತಭವನದ ವಕ್ತಾರ ರಾಬರ್ಟ್ ಗಿಬ್ಸ್ ಹೇಳಿದ್ದಾರೆ.

18ರಿಂದ 24 ತಿಂಗಳ ಅವಧಿಯಲ್ಲಿ ಆಫ್ಘಾನಿಸ್ತಾನ ಸೈನಿಕರಿಗೆ ಅಮೆರಿಕದ ಸೈನಿಕರು ತರಬೇತಿ ನೀಡಲಿದ್ದಾರೆ. ಆದರೆ, ಆ ಸಮಯದಲ್ಲಿ ಅಲ್ಲಿನ ಸನ್ನಿವೇಶವನ್ನು ಗಮನಿಸಿ ಸೇನೆಯನ್ನು ಯಾವ ವೇಗದಲ್ಲಿ ವಾಪಸು ಕರೆಯಿಸಿಕೊಳ್ಳಬೇಕೆಂದು ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದರು. ಈ ಎರಡೂ ವರ್ಷಗಳ ಕಾಲ ತಾಲಿಬಾನ್ ತಣ್ಣಗೆ ಕುಳಿತಿದ್ದು, ಅಮೆರಿಕ ಸೇನೆ ವಾಪಸಾದ ಮೇಲೆ ಮತ್ತೆ ತಲೆ ಎತ್ತಲಿದೆ ಎಂಬ ವಾದವನ್ನು ರಾಬರ್ಟ್ ಗಿಬ್ಸ್ ತಳ್ಳಿಹಾಕಿದರು.

ಹಾಗಿದ್ದಲ್ಲಿ ಒಳ್ಳೆಯದೇ ಆಯಿತು. ತಾಲಿಬಾನ್ ಉಗ್ರರು ನುಗ್ಗಿದ ಪ್ರದೇಶದ ಮೇಲೆ ನಾವು ದಾಳಿ ಇಡುತ್ತೇವೆ. ಆಫ್ಘನ್ ಸೈನಿಕರಿಗೆ ಮತ್ತಷ್ಟು ತರಬೇತಿ ನೀಡುತ್ತೇವೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ