ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಷ್ಯಾ ನೈಟ್ ಕ್ಲಬ್ ಅಗ್ನಿದುರಂತ; 101ಕ್ಕೂ ಹೆಚ್ಚು ಬಲಿ (Russia | Perm | Nightclub | Blast)
Bookmark and Share Feedback Print
 
ರಷ್ಯಾದ ಉರಾಲ್ ಪಾಂತ್ಯದ ಪೆರ್ಮ್ ನಗರದ ನೈಟ್ ಕ್ಲಬ್ ಒಂದರಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ 101 ಮಂದಿ ಸಾವನ್ನಪ್ಪಿದ್ದಾರೆ. ಪಟಾಕಿ ಸಿಡಿಸುವಾಗ ಸುರಕ್ಷತೆಯನ್ನು ಕಡೆಗಣಿಸಿದ್ದೇ ಕಾರಣ ಎಂದು ಹೇಳಲಾಗುತ್ತಿದ್ದು, ಭಯೋತ್ಪಾದಕರ ಕೃತ್ಯ ಎಂಬ ವರದಿಗಳನ್ನು ರಷ್ಯನ್ ಸರಕಾರ ತಳ್ಳಿ ಹಾಕಿದೆ.

ಅಲ್ಲಿನ ಸ್ಥಳೀಯ ಸರಕಾರದ ಆರೋಗ್ಯ ಸಚಿವರು ನೀಡಿರುವ ಮಾಹಿತಿ ಪ್ರಕಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಏಳು ಮಂದಿ ಸೇರಿದಂತೆ ಘಟನೆ ಒಟ್ಟು ಬಲಿಯಾದವರ ಸಂಖ್ಯೆ 101ಕ್ಕೇರಿದೆ. ಪ್ರಸಕ್ತ 85 ಮಂದಿ ಗಂಭೀರ ಗಾಯಗೊಂಡವರೂ ಸೇರಿದಂತೆ 140 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

'ಲೇಮ್ ಹಾರ್ಸ್ ಬಾರ್'ನ ಎಂಟನೇ ವಾರ್ಷಿಕೋತ್ಸವಕ್ಕೆ ಸುಮಾರು 230ರಷ್ಟು ಅದರದ್ದೇ ಆದ ಸಿಬ್ಬಂದಿಗಳು ಮತ್ತು ಅವರ ಕುಟುಂಬಸ್ಥರು ಸೇರಿದ್ದರು. ಈ ಸಂತೋಷ ಕೂಟದಲ್ಲಿ ಪಟಾಕಿಗಳನ್ನು ಸಿಡಿಸುತ್ತಿದ್ದಾಗ ಅವಘಢ ಸಂಭವಿಸಿದೆ. ರಾಕೆಟ್ ಒಂದನ್ನು ಹಾರಿಸಿ ಬಿಡುವಾಗ ದಿಕ್ಕು ತಪ್ಪಿದ ಕಾರಣ ನೈಟ್ ಕ್ಲಬ್ಬಿಗೆ ಬೆಂಕಿ ಹತ್ತಿಕೊಂಡಿತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದಾಗಿ ವಿಷಕಾರಿ ಕಾರ್ಬನ್ ಮೋನಾಕ್ಷೈಡ್ ಉತ್ಪತ್ತಿಯಾದ ಕಾರಣ ಅದನ್ನು ಸೇವಿಸಿ ಮತ್ತು ಭೀತರಾಗಿ ಓಡಲಾರಂಭಿಸಿದಾಗ ನೂಕುನುಗ್ಗಲು ಉಂಟಾಗಿ ಹೆಚ್ಚಿನ ಸಾವುಗಳು ಸಂಭವಿಸಿದವು ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ ಈ ದುರ್ಘಟನೆಯಲ್ಲಿ ಭಯೋತ್ಪಾದಕರ ಯಾವುದೇ ಕೈವಾಡವಿರುವುದನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ಭದ್ರತಾ ಅಧಿಕಾರಿಗಳು ಈ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಫೋಟಕ ಅಥವಾ ಇತರ ಪರಿಕರಗಳ ಸಾಕ್ಷ್ಯಗಳು ಸ್ಥಳದಲ್ಲಿ ಲಭ್ಯವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ