ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪೈಗಂಬರ್ ಆದೇಶ ಮಸೀದಿ ದಾಳಿಗೆ ಕಾರಣ:ತಾಲಿಬಾನ್ (Prophet Muhammad | Rawalpindi mosque | Pakistan | Taliban)
Bookmark and Share Feedback Print
 
ಮಸೀದಿ ಹಾಗೂ ಸೇನಾ ನೆಲೆಯ ಮೇಲೆ ನಡೆದ ದಾಳಿಯ ಹೊಣೆಯನ್ನು ಹೊತ್ತುಕೊಂಡಿರುವ ಉಗ್ರಗಾಮಿ ಸಂಘಟನೆ ತೆಹರಿಕ್-ಎ-ತಾಲಿಬಾನ್ ಪಾಕಿಸ್ತಾನ(ಟಿಟಿಪಿ), ಪ್ರವಾದಿ ಮೊಹಮ್ಮದ್ ಪೈಗಂಬರ್ ಆದೇಶದಂತೆ ದಾಳಿ ಮಾಡಲಾಗಿದೆ ಎಂದು ಹೇಳಿಕೆ ನೀಡಿದೆ

ಟಿಟಿಪಿ ಮುಖ್ಯಸ್ಥ ವಲಿಯೂರ್ ರೆಹ್ಮಾನ್ ಮೆಹಸೂದ್ ಮಾತನಾಡಿ, ಸೇನಾಧಿಕಾರಿಗಳ ಮೇಲೆ ದಾಳಿ ಮಾಡುವುದು ನಮ್ಮ ಗುರಿಯಾಗಿತ್ತು. ಮುಂಬರುವ ದಿನಗಳಲ್ಲಿ ಸೇನಾಧಿಕಾರಿಗಳ ಮೇಲೆ ಮತ್ತಷ್ಟು ಇಂತಹ ದಾಳಿಗಳು ನಡೆಯಲಿವೆ ಎಂದು ಎಚ್ಚರಿಸಿದ್ದಾರೆ.

ನಿನ್ನೆ ನಡೆದ ಮಸೀದಿ ಹಾಗೂ ಸೇನಾನೆಲೆಗಳ ಮೇಲೆ ಸೇನಾಧಿಕಾರಿಗಳ ಸಂಬಂಧಿಕರು ನಾಗರಿಕರು ಸಾವನ್ನಪ್ಪಿದ್ದಾರೆ. ಆದರಿಂದ ನಮಗೆ ವ್ಯತ್ಯಾಸವಾಗುವದಿಲ್ಲ ಎಂದು ಮೆಹಸೂದ್ ಹೇಳಿದ್ದಾರೆ.

ರಾವಲ್ಪಿಂಡಿಯಲ್ಲಿ ನಿನ್ನೆ ಮೂವರು ಉಗ್ರರು ನಡೆಸಿದ ದಾಳಿಯಲ್ಲಿ 39 ಮಂದಿ ಸಾವನ್ನಪ್ಪಿದ್ದು, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ