ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶೀಘ್ರದಲ್ಲಿ ಮುಷ್ರಫ್ ರಾಜಕೀಯ ಪ್ರವೇಶ (Pervez Musharraf | Political comeback | PML-Q)
Bookmark and Share Feedback Print
 
ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷ್ರಫ್ ಅವರ ರಾಜಕೀಯ ಪ್ರವೇಶಕ್ಕೆ ಹೇರಿದ ಎರಡು ವರ್ಷಗಳ ನಿಷೇಧ ಅಂತ್ಯಗೊಂಡ ಹಿನ್ನೆಲೆಯಲ್ಲಿ, ಮುಂಬರುವ 2-4 ತಿಂಗಳುಗಳಲ್ಲಿ ರಾಜಕೀಯ ಪ್ರವೇಶಿಸಲು ಮುಷ್ರಫ್, ಆತ್ಮಿಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ,ಪರ್ವೇಜ್ ಮುಷ್ರಫ್ ರಾಜಕೀಯ ಪ್ರವೇಶ ಕುರಿತಂತೆ ಪಿಎಂಎಲ್ (ಕ್ಯೂ) ಪಕ್ಷದ ಹಿರಿಯ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ 2-4 ತಿಂಗಳಲ್ಲಿ ರಾಜಕೀಯಕ್ಕೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನ ಮುಸ್ಲಿಂ ಲೀಗ್‌ (ಕ್ಯೂ) ನಾಯಕ ಶೇರ್ ಅಫಘಾನ್ ನಿಯಾಜಿ ಮತ್ತು ತಮ್ಮ ಪಕ್ಷ ಹಾಗೂ ಪಿಎಂಎಲ್ (ಎಫ್‌) ಮುಷ್ರಫ್ ಪಾಕಿಸ್ತಾನದ ರಾಜಕೀಯಕ್ಕೆ ಮರಳುವುದನ್ನು ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.

ದೇಶದ ಪ್ರಮುಖ ರಾಜಕೀಯ ಪಕ್ಷವಾದ ಎಂಕ್ಯೂಎಂ ಪಕ್ಷ ಕೂಡಾ ಮುಫ್ರಫ್ ಬಗ್ಗೆ ಮೃದು ಭಾವನೆಯನ್ನು ಹೊಂದಿದೆ. ಮುಫ್ರಫ್ ರಾಜಕೀಯ ಪ್ರವೇಶಿಸುವುದನ್ನು ಬೆಂಬಲಿಸುತ್ತದೆ ಎಂದು ನಿಯಾಜಿ ಹೇಳಿದ್ದಾರೆ.

ಮುಫ್ರಫ್ ಬಹುತೇಕ ಮುಂಬರುವ 2-4 ತಿಂಗಳಲ್ಲಿ ಪಾಕಿಸ್ತಾನಕ್ಕೆ ಮರಳುವ ಸಾಧ್ಯತೆಗಳಿವೆ ಎಂದು ನಿಯಾಜಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ