ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪೇಶಾವರ್‌ನಲ್ಲಿ ಕಾರ್‌ ಬಾಂಬ್‌ ಸ್ಫೋಟ:3 ಬಲಿ (Police | Taliban | Pakistan | Mian Iftikhar Hussain | South Waziristan)
Bookmark and Share Feedback Print
 
ಪಾಕಿಸ್ತಾನದ ಆಗ್ನೆಯ ಭಾಗದಲ್ಲಿರುವ ಪೇಶಾವರ್‌ನ ಕೆಂಟುಕಿ ಫ್ರೈಡ್ ಚಿಕನ್ ಫಾಸ್ಟ್-ಫುಡ್ ರೆಸ್ಟಾರೆಂಟ್ ಬಳಿ ಉಗ್ರರು ಕಾರ್ ಬಾಂಬ್‌ ಸ್ಫೋಟಿಸಿದ ಹಿನ್ನೆಲೆಯಲ್ಲಿ ಕನಿಷ್ಟ ಮೂವರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನದ-ಪಾಕಿಸ್ತಾನ ಗಡಿಭಾಗದಲ್ಲಿ ಅಡಗುತಾಣಗಳನ್ನು ನಿರ್ಮಿಸಿಕೊಂಡಿರುವ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಸೇನೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಉಗ್ರಗಾಮಿಗಳು ಪೇಶಾವರ್‌ನಲ್ಲಿ ಕಾರ್ ಬಾಂಬ್ ಸ್ಫೋಟಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶನಿವಾರದಂದು ನಡೆದ ಬಾಂಬ್‌ಸ್ಫೋಟದಲ್ಲಿ ಹಲವಾರು ವಾಹನಗಳು ಜಖಂಗೊಂಡಿದ್ದು, ಅಂಗಡಿ ಮುಗ್ಗಟ್ಟುಗಳ ಕಿಟಿಕಿಗಳು ಮುರಿದು ರಸ್ತೆಯ ಮೇಲೆ ಹರಡಿವೆ. ಘಟನೆಯಲ್ಲಿ ಕನಿಷ್ಟ ಮೂವರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿ ಗೊಹರ್ ಝಮಾನ್ ತಿಳಿಸಿದ್ದಾರೆ.

ಭಯೋತ್ಪಾದಕರು ಸ್ಫೋಟಕಗಳನ್ನು ಕಾರಿನಲ್ಲಿ ಅಳವಡಿಸಿ ರಿಮೋಟ್ ಕಂಟ್ರೋಲ್ ಮೂಲಕ ಸ್ಫೋಟಿಸಿರಬಹುದು ಎಂದು ಮಾಹಿತಿ ಖಾತೆ ಸಚಿವ ಮಿಯಾನ್ ಇಫ್ತಿಕಾರ್ ಹುಸೇನ್ ತಿಳಿಸಿದ್ದಾರೆ.

ಸ್ಫೋಟದ ದಾಳಿಯ ಹೊಣೆಯನ್ನು ಇಲ್ಲಿಯವರೆಗೆ ಯಾವುದೇ ಉಗ್ರಗಾಮಿ ಸಂಘಟನೆಗಳು ಹೊತ್ತುಕೊಂಡಿಲ್ಲ. ಬುಡಕಟ್ಟು ಪ್ರದೇಶದಲ್ಲಿರುವ ದಕ್ಷಿಣ ವಜೀರಿಸ್ತಾನ್‌ನಲ್ಲಿ ತಾಲಿಬಾನ್ ಉಗ್ರರ ವಿರುದ್ಧ ಸೇನಾಕಾರ್ಯಾಚರಣೆ ಆರಂಭಿಸಿದ ನಂತರ ಇಸ್ಲಾಮಿಕ್ ಪ್ರತ್ಯೇಕತಾವಾದಿಗಳು ಅಕ್ಟೋಬರ್ ತಿಂಗಳಿನಿಂದ ಸುಮಾರು 400 ಮಂದಿಯನ್ನು ಹತ್ಯೆ ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ