ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಉಗ್ರರಿಗೆ ಭಾರತ ಬೆಂಬಲ: ಮಲಿಕ್ (Indian arms | NWFP | Rehman Malik)
Bookmark and Share Feedback Print
 
ಭಾರತ ಪಾಕಿಸ್ತಾನದಲ್ಲಿರುವ ಉಗ್ರರಿಗೆ ಬೆಂಬಲ ನೀಡುತ್ತಿದೆ ಎನ್ನುವುದನ್ನು ಸಾಬೀತುಪಡಿಸಲು ಮತ್ತೊಂದು ಹರಸಾಹಸ ನಡೆಸಿದೆ. ನಾರ್ಥ್ ವೆಸ್ಟ್ ಫ್ರಂಟೈಯರ್ ಪ್ರಾಂತ್ಯದ ಬಾರಾ ಪ್ರದೇಶದಲ್ಲಿ ಭಾರತದ ಶಸ್ತ್ರಾಸ್ತ ಹಾಗೂ ಸ್ಫೋಟಕಗಳನ್ನು ಹೊಂದಿರುವ ಟ್ರಕ್‌‌ಗಳನ್ನು ಸೇನಾಪಡೆಗಳು ವಶಕ್ಕೆ ತೆಗೆದುಕೊಂಡಿವೆ ಎಂದು ಆತಂರಿಕ ಸಚಿವ ರೆಹ್ಮಾನ್ ಮಲಿಕ್ ಆರೋಪಿಸಿದ್ದಾರೆ.

ನಾರ್ಥ್ ವೆಸ್ಟ್ ಫ್ರಂಟೈಯರ್ ಪ್ರಾಂತ್ಯದ ಬಾರಾ ಪ್ರದೇಶದಲ್ಲಿ ಭಾರತದಲ್ಲಿ ತಯಾರಾದ ಶಸ್ತ್ರಾಸ್ತ ಹಾಗೂ ಸ್ಫೋಟಕಗಳನ್ನು ಸಾಗಿಸುತ್ತಿರುವ ಸಂದರ್ಭದಲ್ಲಿ ಭಧ್ರತಾ ಪಡೆಗಳು ವಶಕ್ಕೆ ತೆಗೆದುಕೊಂಡಿವೆ ಎಂದು ಸಚಿವ ಮಲಿಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ದೇಶದೊಳಗಿರುವ ಪ್ರತ್ಯೇಕತಾವಾದಿಗಳಿಗೆ ಭಾರತ ಅಫ್ಘಾನಿಸ್ತಾನದ ಮೂಲಕ ಶಸ್ತ್ರಾಸ್ತ್ರಗಳನ್ನು ಸರಬರಜಾು ಮಾಡುತ್ತಿದೆ.ಪಾಕಿಸ್ತಾನ ಸರಕಾರ ಆಧಾರಗಳಿಲ್ಲದೇ ನಂಬವುದಿಲ್ಲ. ಈಗ ಭಾರತ ವಿಚ್ಚಿದ್ರಕಾರಿ ಶಕ್ತಿಗಳಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದೆ ಎನ್ನುವುದಕ್ಕೆ ಆಧಾರ ದೊರೆತಿದೆ ಎಂದು ಮಲಿಕ್ ಹೇಳಿದ್ದಾರೆ.

ರಾವಲ್ಪಿಂಡಿಯ ಮಸೀದಿಯ ಮೇಲೆ ನಡೆದ ದಾಳಿಯನ್ನು ಖಂಡಿಸಿದ ಸಚಿವ ಮಲಿಕ್ ,ದೇಶದ ಧಾರ್ಮಿಕ ಮುಖಂಡರು ಆತ್ಮಾಹುತಿ ದಾಳಿ ನಡೆಸುವ ಉಗ್ರರ ವಿರುದ್ಧ ಫತ್ವಾ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ದಕ್ಷಿಣ ವಜೀರಿಸ್ತಾನ್ ಹಾಗೂ ಸ್ವಾತ್ ಕಣಿವೆಯಲ್ಲಿ ನಡೆಯುತ್ತಿರುವ ಸೇನಾಕಾರ್ಯಾಚರಣೆಯ ಸೇಡನ್ನು ತೀರಿಸಿಕೊಳ್ಳಲು, ಉಗ್ರರು ದಾಳಿಗಳನ್ನು ತೀವ್ರಗೊಳಿಸಿದ್ದಾರೆ ಎಂದು ಸಚಿವ ರೆಹ್ಮಾನ್ ಮಲಿಕ್ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ