ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಾಣಾ ನಿವಾಸದಲ್ಲಿ ಅಲ್ ಖಾಯಿದಾ ಡಿವಿಡಿ: ಎಫ್‌ಬಿಐ (Rana | FBI | DVD | India | Canada | al-Qaeda)
Bookmark and Share Feedback Print
 
ಭಾರತದಲ್ಲಿ ಭಯೋತ್ಪಾದನೆ ದಾಳಿ ನಡೆಸುವ ಸಂಚು ರೂಪಿಸಿದ ಆರೋಪದ ಮೇರೆಗೆ ಬಂಧಿತನಾಗಿರುವ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ರಾಣಾ ಮನೆಯಲ್ಲಿ ಸಿಕ್ಕಿದ್ದ ಅಲ್ ಖಾಯಿದಾ ಡಿವಿಡಿಗಳನ್ನು ಎಫ್‌ಬಿಐ ಷಿಕಾಗೋ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಏತನ್ಮಧ್ಯೆ, ತಮ್ಮ ಕಕ್ಷಿದಾರ ಗೌರವಾನ್ವಿತ ವ್ಯಾಪಾರಸ್ಥ, ಇದನ್ನು ಸಾಬೀತುಪಡಿಸುವ ಸಾಕ್ಷಿಗಳಿವೆ ಎಂದು ರಾಣಾ ಪರ ವಕೀಲ ಪ್ಯಾಟ್ರಿಕ್ ಬೆಲ್ಜಿಯಮ್ ವಾದ ಮಂಡಿಸಿದ್ದಾರೆ.

ಆದರೆ, ತನಿಖೆ ವೇಳೆ ದೊರೆತ ಎರಡು ಡಿವಿಡಿಗಳು ಅಲ್ ಖಾಯಿದಾ ಸಂಘಟನೆಗೆ ಸಂಬಂಧಿಸಿವೆ. ಒಂದು ಡಿವಿಡಿ ಲಾಡೆನ್ ಭಾಷಣ ಒಳಗೊಂಡಿದ್ದರೆ, ಮತ್ತೊಂದು ಡಿವಿಡಿಯಲ್ಲಿ ಡೆನ್ಮಾರ್ಕ್ ದೂತವಾಸ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಿದ ವಿವರವಿದೆ ಎಂದು ಎಫ್‌ಬಿಐ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ