ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಾರ್ಜ್ ವಾಷಿಂಗ್ಟನ್ ಪತ್ರ 3,218,500ಡಾಲರ್‌ಗೆ ಹರಾಜು! (George Washington | Washington | auction | Edgar Allan Poe)
Bookmark and Share Feedback Print
 
ಅಮೆರಿಕದ ಪ್ರಪ್ರಥಮ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಅವರು ಬರೆದ ಪತ್ರವೊಂದು ಹರಾಜಿನಲ್ಲಿ 3,218,500 ಡಾಲರ್‌ಗೆ ಮಾರಾಟವಾಗಿದ್ದು, ಇದು ವಿಶ್ವದ ಅತ್ಯಂತ ದುಬಾರಿ ಪತ್ರ ಎಂಬ ಶ್ಲಾಘನೆಗೆ ಭಾಜನವಾಗಿದೆ.

ಜಾರ್ಜ್ 1787ರಲ್ಲಿ ತಮ್ಮ ಸಂಬಂಧಿ ಬುಷರ್ಡ್ ವಾಷಿಂಗ್ಟನ್ ಅವರಿಗೆ ಪತ್ರ ಬರೆದು ಹೊಸ ಸಂವಿಧಾನದ ಕರಡನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿದ್ದ ಪತ್ರ ಅದು. ನೂರಕ್ಕೂ ಹೆಚ್ಚು ವರ್ಷಗಳ ಕಾಲ ಈ ಪತ್ರವನ್ನು ಬುಷರ್ಡ್ ವಂಶಸ್ಥರು ಕಾಯ್ದುಕೊಂಡು ಬಂದಿದ್ದರು. ಆದರೆ ಇಷ್ಟು ಬೃಹತ್ ಮೊತ್ತದ ಹಣ ಕೊಟ್ಟು ಕೊಂಡುಕೊಂಡ ವ್ಯಕ್ತಿ ಯಾರು ಎಂಬುದು ತಿಳಿದು ಬಂದಿಲ್ಲ.

ಸ್ವತಃ ಹರಾಜುದಾರರಿಗೇ ಇಷ್ಟು ದೊಡ್ಡ ಪ್ರಮಾಣದ ಹಣ ಸಿಗುತ್ತದೆ ಎಂದು ತಿಳಿದಿರಲಿಲ್ಲ. ಗರಿಷ್ಠ 2.5ದಶಲಕ್ಷ ಡಾಲರ್ ಹಣ ಸಿಗಬಹುದು ಎಂದು ಹರಾಜು ಸಂಸ್ಥೆ ರಾಕ್‌ಫೆಲರ್ ಸೆಂಟರ್ ವಿವರಿಸಿದೆ. ವಾಷಿಂಗ್ಟನ್ ಅವರ ಪತ್ರವೊಂದು ಈ ಹಿಂದೆ 8,34,500 ಡಾಲರ್‌ಗಳಿಗೆ ಮಾರಾಟವಾಗಿತ್ತು.

ಇದೇ ವೇಳೆ ಕವಿ ಎಡ್ಗರ್ ಅಲೆನ್‌ಪೋ ಅವರ ಕವನದ ಹಸ್ತಪ್ರತಿಯೊಂದು 8,30,500ಡಾಲರ್‌ಗೆ ಮಾರಾಟವಾಗಿ ವಿಶ್ವದಾಖಲೆ ಸೃಷ್ಟಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ