ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಂಡೋನೇಷ್ಯಾ ಬಾರ್‌ನಲ್ಲಿ ಅಗ್ನಿ ದುರಂತ: 20 ಬಲಿ (Indonesia | fire Karaoke bar | Sumatra island | Police)
Bookmark and Share Feedback Print
 
ಇಂಡೋನೇಷ್ಯಾದ ಕಾರೋಕೆ ಬಾರ್‌ವೊಂದರಲ್ಲಿ ಆಕಸ್ಮಿಕವಾಗಿ ಅಗ್ನಿ ದುರಂತ ಸಂಭವಿಸಿದ ಪರಿಣಾಮ 20ಮಂದಿ ಸಾವನ್ನಪ್ಪಿದ್ದು, ಪ್ರಕರಣದ ಕುರಿತಂತೆ ಬಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾರ್‌ನ ಹಿಂದಿನ ರೂಮ್‌ನಲ್ಲಿ ಸಿಂಥೆಟಿಕ್ ನೆಲಹಾಸಿಗೆ ಬೆಂಕಿ ತಗುಲಿದ ಪರಿಣಾಮ ಘಟನೆ ಸಂಭವಿಸಿರುವುದಾಗಿ ವಿಚಾರಣೆ ನಡೆಸಿದ ಮೂರು ಮಂದಿ ನೌಕರರು ತಿಳಿಸಿರುವುದಾಗಿ ಮುಖ್ಯ ಡಿಟೆಕ್ಟಿವ್ ಕರ್ನಲ್ ಆಂಡ್ರಿಯಾಂಟೋ ಹೇಳಿದ್ದಾರೆ.

ಆದರೆ ಬಾರ್‌ನಲ್ಲಿ ನೆಲದ ಮೇಲೆ ಹಾಸಿರುವ ನೆಲಹಾಸಿನ ಮೇಲೆ ಆಕಸ್ಮಿಕವಾಗಿ ಸಿಗರೇಟ್ ಬಿದ್ದು ಬೆಂಕಿ ಹೊತ್ತಿಕೊಂಡಿರಬೇಕು ಎಂದು ಅವರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಕನಿಷ್ಟ ಐದು ಶಿಕ್ಷೆ ಆಗುವ ಸಾಧ್ಯತೆ ಇದೆ ಎಂದು ಆಂಡ್ರಿಯಾಂಟೋ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ