ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದುಬೈ ದಿವಾಳಿಗೆ ಶೇಖ್‌ಗಳ ಐಷಾರಾಮಿ ಜೀವನ ಕಾರಣ! (Dubai | London | Mohammed | desert | Western liberalism)
Bookmark and Share Feedback Print
 
ಮರಳುಗಾಡಿನ ಉದ್ದಕ್ಕೂ ಕುದುರೆಗಳ ಸವಾರಿ, ಐಶಾರಾಮಿ ಜೀವನ, ಮೋಜು-ಮಸ್ತಿಗಳಲ್ಲಿ ಇಂಗ್ಲೆಂಡ್ ರಾಣಿಯಂತೆ ಜೀವನ ನಡೆಸುತ್ತಿರುವ ದುಬೈ ಶೇಖ್‌ಗಳ ದುಂದು ವೆಚ್ಚದಿಂದಲೇ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಎಂಬುದಾಗಿ ಕೆಲವು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗೊತ್ತು ಗುರಿ ಇಲ್ಲದ ಜೀವನ, ದುಬಾರಿ ಬೆಲೆಯ ಮದ್ಯಪಾನದೊಂದಿಗೆ ಕುದುರೆ ರೇಸ್‌ಗಳಲ್ಲಿ ಕಾಲ ಕಳೆಯುತ್ತಿರುವುದೇ ಇಲ್ಲಿನ ಆರ್ಥಿಕ ಬಿಕ್ಕಟ್ಟಿಗೆ ಮೂಲವಾಗಿದೆ ಎಂದು ದೂರಿದ್ದಾರೆ.

ದುಬೈನ ಮಿಲಿಯಾಧಿಪತಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಮಕ್ತುಮ್ಸ್ ಅವರ ಜೀವನ ಶೈಲಿಯೇ ದುಬಾರಿ ವೆಚ್ಚದ್ದಾಗಿದೆ. ಸಮುದ್ರ ಕಿನಾರೆ ಸಮೀಪದ ಬಾರ್‌ಗಳಲ್ಲಿ ಬಿಕಿನಿ ಧರಿಸಿದ ಲಲನೆಯರನ್ನು ಕುಣಿಸುವುದರೊಂದಿಗೆ ಸಾಕಷ್ಟು ಹಣ ಮಾಡುವವರು ಒಂದೆಡೆಯಾದರೆ, ಇಲ್ಲಿಗೆ ಬಂದು ಹಣ ಕಳೆದುಕೊಳ್ಳುವವರ ಸಂಖ್ಯೆ ದುಪ್ಪಟ್ಟು. ಆದರೆ ಇಲ್ಲಿ ಇವರ ಐಶಾರಾಮಿ ಜೀವನದ ಬಗ್ಗೆ ಪ್ರಶ್ನಿಸುವ ಹಾಗಿಲ್ಲ.

ಆದರೆ ದುಬೈ ಶೇಖ್ ಆಗಿರುವ 60ರ ಹರೆಯದ ಮೊಹಮ್ಮದ್ ಲಂಡನ್ ಅಥವಾ ನ್ಯೂಯಾರ್ಕ್‌ಗಳಲ್ಲೂ ದುಬೈನಂತೆ ಮಾಡುವ ಆಕಾಂಕ್ಷೆ ಹೊಂದಿದ್ದಾರೆ. ಆದರೆ ಇದೀಗ ದುಬೈ ಸದ್ಯಕ್ಕೆ ತಲೆ ಎತ್ತದಂತಹ ಸಾಲದ ಸುಳಿಗೆ ಸಿಕ್ಕಿದೆ. ಶೇಖ್ ದುಬೈನಾದ್ಯಂತ ಕೃತಕ ದ್ವೀಪ ಪ್ರದೇಶ, ಅಂತಾರಾಷ್ಟ್ರೀಯ ಶಾಲೆ, ಮಲ್ಟಿನ್ಯಾಶನಲ್ ಕಂಪನಿ ಮತ್ತು ಐಶಾರಾಮಿ ಹೋಟೆಲ್‌ಗಳಿವೆ. ಅದಕ್ಕಾಗಿ ಅರಬ್ ದೇಶದ ಯುವಕರು ಕೆಲಸಕ್ಕೆ ಬೇಕಾಗಿದ್ದಾರೆ ಎಂಬ ಆಹ್ವಾನವನ್ನೂ ನೀಡಿದ್ದರು.

ಇತ್ತೀಚೆಗಷ್ಟೇ ಫೋರ್ಬ್ಸ್ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಮೊಹಮ್ಮದ್ 12ಬಿಲಿಯನ್ ಡಾಲರ್ ಒಡೆಯ ಎಂಬುದಾಗಿ ಹೇಳಿತ್ತು. ದುಬೈಯನ್ನು ಇನ್ನಷ್ಟು ಆಧುನಿಕತೆಯತ್ತ ಕೊಂಡೊಯ್ಯುವ ಕನಸು ಹೊತ್ತಿರುವುದಾಗಿಯೂ ಹೇಳಿತ್ತು. ಅಚ್ಚರಿ ಎಂದರೆ ಇವತ್ತು ಅದೇ ಕನಸು ಮತ್ತು ಐಶಾರಾಮಿ ಜೀವನ ದುಬೈಯನ್ನು ಸಾಲದ ಸುಳಿಗೆ ನೂಕಿದೆ. ದುಬೈಯನ್ನು ಮಹಾನಗರಿ, ಅಧುನಿಕತೆಯತ್ತ ಬೆಳೆಸುವ ಮೊಹಮ್ಮದ್ ಕನಸು ನನಸಾಗುವ ಮುನ್ನವೇ ಭಗ್ನಗೊಂಡಿದೆ. ಇದೀಗ ದುಬೈ ಸುಮಾರು 60ಬಿಲಿಯನ್ ಡಾಲರ್‌ನಷ್ಟು ಸಾಲದ ಶೂಲಕ್ಕೆ ಸಿಕ್ಕಿದೆ. ದುಬೈ ದಿವಾಳಿ ಅಂಚಿಗೆ ಬಂದು ನಿಂತಿದ್ದರೂ ಸಹ ಭಾರತಕ್ಕೆ ಇದರಿಂದ ಯಾವುದೇ ಸಮಸ್ಯೆ ಉಂಟಾಗಲಾರದು ಎಂದು ವಿಶ್ವಬ್ಯಾಂಕ್ ತಿಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ