ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಡೆನ್ ಎಲ್ಲಿದ್ದಾನೆಂದು ತಿಳಿದಿಲ್ಲ: ಅಮೆರಿಕ (Laden | America | Pakistan | India | Obama)
Bookmark and Share Feedback Print
 
ಇಡೀ ಜಗತ್ತೇ ಹುಡುಕುತ್ತಿದ್ದರೂ ಅಲ್ ಖಾಯಿದಾ ನಾಯಕ ಒಸಾಮ ಬಿನ್ ಲಾಡೆನ್ ಎಲ್ಲಿದ್ದಾನೆ ಎಂಬುದು ಮಾತ್ರ ತಿಳಿಯುತ್ತಿಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ ಹೇಳಿದ್ದಾರೆ.

ಒಸಾಮ ಎಲ್ಲಿದ್ದಾನೆ ಗೊತ್ತಿಲ್ಲ, ಗೊತ್ತಾಗಿದ್ದರೆ ಅಲ್ಲಿಗೆ ನುಗ್ಗುತ್ತಿದ್ದೇವು ಎಂದು ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಸಾಮ ಎಲ್ಲಿದ್ದಾನೆ ಎಂದು ಅಮೆರಿಕದ ಬೇಹುಗಾರಿಕೆಗೆ ತಿಳಿದಿದೆ ಎಂದು ಹೇಳಗಾಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿ, ಅದು ಬಹಳ ಹಿಂದೆ ಹೇಳಿದ ಮಾತು ಎಂದು ನುಣುಚಿಕೊಂಡರು.

ಲಾಡೆನ್ ಅಫ್ಘಾನಿಸ್ತಾನ್-ವಜಿರಿಸ್ತಾನ್ ಗುಡ್ಡಗಾಡು ಪ್ರದೇಶಗಳಲ್ಲಿಯೇ ಅಡಗಿಕೊಂಡಿರುವುದಾಗಿ ಅಮೆರಿಕದ ಬೇಹುಗಾರಿಕೆ ಸಂಸ್ಥೆ ಸಾಕಷ್ಟು ಬಾರಿ ಹೇಳಿಕೆ ನೀಡಿತ್ತು. ಇದೀಗ ಗೇಟ್ ಒಸಾಮ ಎಲ್ಲಿದ್ದಾನೆ ಎಂದು ತಿಳಿದಿಲ್ಲ ಎಂದು ಹೇಳುವ ಮೂಲಕ ಇಬ್ಬಗೆಯ ಹೇಳಿಕೆ ನೀಡಿದಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ