ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್‌ ನಿಯಂತ್ರಣಕ್ಕೆ ಪಾಕ್ ಆದ್ಯತೆ:ಗೇಟ್ಸ್ (Pakistan | Taliban | Robert Gates)
Bookmark and Share Feedback Print
 
ಪಾಕಿಸ್ತಾನ ಗಡಿ ಭಾಗಗಳಲ್ಲಿ ಹೆಚ್ಚುತ್ತಿರುವ ತಾಲಿಬಾನ್ ಉಗ್ರರ ಚಟುವಟಿಕೆಗಳ ಗಂಭೀರ ಪರಿಣಾಮದ ಬಗ್ಗೆ ಅರಿವು ಉಂಟಾಗಿದ್ದರಿಂದ ಇದೀಗ ತಾಲಿಬಾನಿಗಳ ವಿರುದ್ಧ ಸೇನಾಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಹೇಳಿದ್ದಾರೆ.

ತಾಲಿಬಾನಿಗಳು ಪಾಕಿಸ್ತಾನದ ನಾಗರಿಕರು, ಸರಕಾರಿ ಅಧಿಕಾರಿಗಳು ಮತ್ತು ಸೇನಾಧಿಕಾರಿಗಳ ಮೇಲೆ ನಿರಂತರ ದಾಳಿ ನಡೆಸಿ ಸರಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸುತ್ತಿದೆ ಎಂದು ಗೇಟ್ಸ್ ತಿಳಿಸಿದ್ದಾರೆ.

ರಾವಲ್ಪಿಂಡಿಯ ಮಸೀದಿಯ ಮೇಲೆ ಬಾಂಬ್-ಗ್ರೆನೆಡ್‌ಗಳಿಂದ ತಾಲಿಬಾನಿ ಉಗ್ರರು ನಡೆಸಿದ ದಾಳಿಯಲ್ಲಿ ಸೇನಾಧಿಕಾರಿಗಳು ಸೇರಿದಂತೆ 37 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಕಳೆದ ರವಿವಾರದಂದು ಪೊಲೀಸ್ ಕಮಾಂಡೊಗಳು, ತಾಲಿಬಾನ್ ನಿಯಂತ್ರಿತ ಪೇಶಾವರ್‌ನಲ್ಲಿ ಆರು ಮಂದಿ ಉಗ್ರರನ್ನು ಬಂಧಿಸಿದ್ದಾರೆ. ಬಂಧಿತ ಉಗ್ರರು ಇತ್ತಿಚೆಗೆ ನಡೆದ ಹಲವಾರು ದಾಳಿಗಳಲ್ಲಿ ಭಾಗವಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಉನ್ನತ ಧಾರ್ಮಿಕ ಗುರುಗಳು ಆತ್ಮಾಹುತಿ ದಾಳಿಗಳು ಇಸ್ಲಾಂ ವಿರೋಧಿಯಾಗಿದೆ ಎಂದು ಫತ್ವಾ ಹೊರಡಿಸಿದ್ದಾರೆ ಎಂದು ಗೇಟ್ಸ್ ತಿಳಿಸಿದ್ದಾರೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳನ್ನು ನಿಯಂತ್ರಿಸುವುದರಿಂದ ಅಲ್‌ಕೈದಾ ಸಂಘಟನೆಯನ್ನು ನಿಯಂತ್ರಿಸಿದಂತಾಗುತ್ತದೆ ಎಂದು ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ