ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪೇಶಾವರ್: ಆತ್ಮಾಹುತಿ ದಾಳಿಗೆ 5 ಬಲಿ (Police | Peshawar | Taliban | suicide bomber)
Bookmark and Share Feedback Print
 
ಪಾಕಿಸ್ತಾನದ ಆಗ್ನೆಯ ಭಾಗದಲ್ಲಿರುವ ಪೇಶಾವರ್ ನಗರದ ನ್ಯಾಯಾಲಯದ ಆವರಣದಲ್ಲಿ ನಡೆದ ಆತ್ಮಾಹುತಿ ಬಾಂಬರ್ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು, 49ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಲಿಬಾನ್ ಉಗ್ರರ ಹಾವಳಿಯಿಂದ ತತ್ತರಿಸಿದ ಪೇಶಾವರ್, ತಾಲಿಬಾನಿಗಳ ವಿರುದ್ಧ ನಡೆಯುತ್ತಿರುವ ಸೇನಾಕಾರ್ಯಾಚರಣೆಯನ್ನು ವಿರೋಧಿಸಿ, ಉಗ್ರರು ನಡೆಸುತ್ತಿರುವ ದಾಳಿಯಲ್ಲಿ ಕಳೆದ ಅಕ್ಟೋಬರ್ ತಿಂಗಳಿನಿಂದ ಡಿಸೆಂಬರ್‌ವರೆಗೆ 270 ಮಂದಿ ಹತ್ಯೆಯಾಗಿದ್ದಾರೆ.

ನಗರದ ಮಧ್ಯಭಾಗದಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ರಿಕ್ಷಾದಲ್ಲಿ ಸ್ಫೋಟಕಗಳೊಂದಿಗೆ ಆಗಮಿಸಿದ ಆತ್ಮಾಹುತಿ ದಳದ ಸದಸ್ಯ ನ್ಯಾಯಾಲಯದ ಕಟ್ಟಡವನ್ನು ಪ್ರವೇಶಿಸಲು ಯತ್ನಿಸಿದಾಗ, ಭಧ್ರತಾ ವ್ಯವಸ್ಥೆಯ ಸುರಕ್ಷತೆಯಿಂದಾಗಿ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದರೆ ನ್ಯಾಯಾಲಯದ ಆವರಣದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಾಗ ಐವರು ಸಾವನ್ನಪ್ಪಿದ್ದು, 49ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಆಗ್ನೆಯ ಪ್ರಾಂತ್ಯದ ಹಿರಿಯ ಸಚಿವ ಬಷೀರ್ ಬಿಲೋರ್ ತಿಳಿಸಿದ್ದಾರೆ.

ಸ್ಫೋಟ ನಡೆದ ಸ್ಥಳದಿಂದ 230 ಅಡಿ ದೂರದಲ್ಲಿ ಆತ್ಮಾಹುತಿ ದಳದ ಸದಸ್ಯನ ರುಂಡ ಪತ್ತೆಯಾಗಿದೆ ಎಂದು ಸಚಿವ ಬಷೀರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ