ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಹ್ಮದಿನೇಜಾದ್ ವಿರುದ್ಧ ಘೋಷಣೆ: ಪೊಲೀಸರಿಂದ ಅಶ್ರುವಾಯ (Iran | Ahmadinejad | Protest | Students Day)
Bookmark and Share Feedback Print
 
ದೇಶದಾದ್ಯಂತ "ವಿದ್ಯಾರ್ಥಿ ದಿನ"ಆಚರಿಸಲು ಸೆಂಟ್ರಲ್ ಟೆಹರಾನ್ ಬಳಿ ಜಮಾವಣೆಗೊಂಡ ವಿದ್ಯಾರ್ಥಿಗಳು ರಾಷ್ಟ್ರಾಧ್ಯಕ್ಷ ಮಹಮೂದ್ ಅಹ್ಮದಿನೇಜಾದ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸಲು ಅಶ್ರುವಾಯ ಸಿಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿದ್ಯಾರ್ಥಿಗಳ ವಾರ್ಷಿಕಾಚರಣೆಯ ದಿನದಂದು, ರಾಷ್ಟ್ರಾಧ್ಯಕ್ಷ ಮಹಮೂದ್ ಅಹ್ಮದಿನೇಜಾದ್ ವಿರುದ್ಧ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ, ಪ್ರತಿಭಟನೆ ಘರ್ಷಣೆಗೆ ತಿರುಗಿದಾಗಿ ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯ ಸಿಡಿಸಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೆದರಬೇಡಿ, ಸರ್ವಾಧಿಕಾರಿ ರಾಷ್ಟ್ರಾಧ್ಯಕ್ಷ ಅಹ್ಮದಿನೇಜಾದ್‌ಗೆ ಮರಣದಂಡನೆಯನ್ನು ವಿಧಿಸಿ. ನಾವೆಲ್ಲರು ಒಗ್ಗಟ್ಟಿನಿಂದ ಇದ್ದೇವೆ ಎನ್ನುವ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಟೆಹರಾನ್‌ನ ಪ್ರತಿಷ್ಠಿತ ಆಮೀರ್ ಕಬೀರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಹ್ಮದಿನೇಜಾದ್ ವಿರುದ್ಧ ಪ್ರತಿಭಟನೆ ನಡೆಸುವಂತೆ ಆನ್‌ಲೈನ್ ಮೂಲಕ ಹೇಳಿಕೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ