ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ -ರಷ್ಯಾ ಐತಿಹಾಸಿಕ ಒಪ್ಪಂದಕ್ಕೆ ಸಹಿ (Manmohan | Medvedev | Nuclear deal)
Bookmark and Share Feedback Print
 
ಭಾರತ ಮತ್ತು ರಷ್ಯ ಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದ ಸೇರಿದಂತೆ ರಕ್ಷಣಾ ಶಸ್ತ್ರಾಸ್ತ್ರ ಒಪ್ಪಂದಕ್ಕೆ ಸಹಿ ಹಾಕಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಭಾರತ ಮತ್ತು ರಷ್ಯಾ ದೇಶಗಳು ರಷ್ಯನ ನಾಗರಿಕ ಪರಮಾಣು ಘಟಕಗಳಿಗೆ ಹೆಚ್ಚುವರಿ ಸರಬರಾಜಿಗಾಗಿ ಒಪ್ಪಂದಕ್ಕೆ ಸಹಿಹಾಕಿವೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇಂದು ರಷ್ಯಾದ ನಾಯಕರೊಂದಿಗೆ ನಡೆಸಿದ ಚರ್ಚೆಗಳಿಂದಾಗಿ ಭಾರತ ಮತ್ತು ರಷ್ಯಾ ಅಣುಶಕ್ತಿ ಕ್ಷೇತ್ರದಲ್ಲಿನ ಸಹಕಾರಕ್ಕೆ ಬಲ ದೊರೆತಂತಾಗಿದೆ.ಅಣುಶಕ್ತಿ ಕ್ಷೇತ್ರದಲ್ಲಿ ಉಭಯ ದೇಶಗಳಿಗೆ ಉತ್ತಮ ಭವಿಷ್ಯವಿದೆ ಎಂದರು.

ಜಾಗತಿಕ ಸಮಸ್ಯೆಗಳ ಕುರಿತಂತೆ ಉಭಯ ದೇಶಗಳ ನಿಲುವು ಒಂದೇ ರೀತಿಯಾಗಿದೆ. ಮತ್ತು ಪರಸ್ಪರ ಸಹಕಾರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಬೇಕಾಗಿದೆ ಎಂದು ಪ್ರಧಾನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಷ್ಯಾದ ರಾಷ್ಟ್ರಾಧ್ಯಕ್ಷ ಡಿಮಿಟ್ರಿ ಮೆಡ್ವಿಡೇವ್ ಮಾತನಾಡಿ, ಉಭಯ ದೇಶಗಳು ಭಯೋತ್ಪಾದನೆಯ ಸಮಸ್ಯೆಯನ್ನು ಎದುರಿಸುತ್ತಿವೆ. ಭಯೋತ್ಪಾದನೆ ನಿಗ್ರಹಕ್ಕಾಗಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ದೇಶಗಳು ಭಯೋತ್ಪಾದನೆಯಿಂದ ನರಳುತ್ತಿದ್ದು. ಪ್ರಸ್ತುತ ಮತ್ತು ಅಂತಿಮ ಶತಕದಲ್ಲಿ ಭಯೋತ್ಪಾದನೆ ದೊಡ್ಡ ಭೂತವಾಗಿದೆ ಎಂದು ಮೆಡ್ವಿಡೇವ್ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ