ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾಕ್‌:ಬಾಂಬ್‌ಸ್ಫೋಟಕ್ಕೆ ಐವರು ಬಲಿ (Blast | Iraq | school)
Bookmark and Share Feedback Print
 
ಇರಾಕ್‌ನ ಶಿಯಾ ಜಿಲ್ಲೆಯ ಸದ್ರ ನಗರದ ಶಾಲೆಯೊಂದರಲ್ಲಿ ಬಾಂಬ್‌ ಸ್ಫೋಟಗೊಂಡು ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ ಮತ್ತು ಇರಾಕ್ ಸೇನಾಪಡೆಗಳಿಂದ ಸುತ್ತುವರೆದ ನಗರದಲ್ಲಿ ಹೆಚ್ಚಿನ ಉಗ್ರರ ದಾಳಿ ನಡೆಯುತ್ತಿರಲಿಲ್ಲ. ಆದರೆ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾಂಬ್‌ಸ್ಫೋಟಿಸಿ ನಾಗರಿಕರಲ್ಲಿ ಆತಂಕ ಮೂಡಿಸಿತು.

ಬಾಂಬ್‌ಸ್ಫೋಟದಲ್ಲಿ ಕನಿಷ್ಟ 34 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳ ಮಾಹಿತಿಯನ್ನು ಆಂತರಿಕ ಇಲಾಖೆ ಖಾತೆ ಸಚಿವರು ಖಚಿತಪಡಿಸಿದ್ದಾರೆ.

ಸದ್ರ ನಗರದಲ್ಲಿ ಸುಮಾರು 2.5 ಮಿಲಿಯನ್ ಜನತೆ ವಾಸಿಸುತ್ತಿದ್ದು, ಅಮೆರಿಕ ವಿರೋಧಿ ಮೌಲ್ವಿಯಾದ ಮುಕ್ತದಾ ಅಲ್ ಸದ್ರ ಅವರ ಭಧ್ರಕೋಟೆಯಾಗಿದೆ.

ಇರಾಕ್‌ನಲ್ಲಿ ಹಿಂಸಾಚಾರ ಇಳಿಮುಖವಾಗಿದ್ದು, ನಾಗರಿಕರು ಹಾಗೂ ಭಧ್ರತಾಪಡೆಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುವುದನ್ನು ಮುಂದುವರಿಸಿದ್ದಾರೆ. ಮುಂದಿನ ವರ್ಷದಲ್ಲಿ ಚುನಾವಣೆಗಳು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಹಿಂಸಾಚಾರ ಉಲ್ಬಣಿಸಬಹುದು ಎಂದು ಅಮೆರಿಕ ಸೇನಾಪಡೆಗಳು ಕಳವಳ ವ್ಯಕ್ತಪಡಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಂಬ್ಸ್ಫೋಟ ಇರಾಕ್, ಶಾಲೆ, ಸದ್ರ