ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶೇಖ್ ಹಸೀನಾ ಭೇಟಿ ಮುಂದಕ್ಕೆ :ಬಾಂಗ್ಲಾ (Hasina | Bangladesh | India)
Bookmark and Share Feedback Print
 
ಪ್ರಧಾನಿ ಮನಮೋಹನ್ ಸಿಂಗ್ ಕೂಪನ್‌ಹೇಗನ್‌ನಲ್ಲಿ ನಡೆಯುತ್ತಿರುವ ಹವಮಾನ ಬದಲಾವಣೆ ಶೃಂಗಸಭೆಯಲ್ಲಿ ನಿರಂತರಾಗಿದ್ದರಿಂದ, ನವದೆಹಲಿಯ ಮನವಿಯ ಮೇರೆಗೆ ಪ್ರಧಾನಿ ಶೇಖ್ ಹಸೀನಾ ಅವರ ಭಾರತ ಭೇಟಿಯನ್ನು ಮುಂದೂಡಲಾಗಿದೆ ಎಂದು ಬಾಂಗ್ಲಾ ಸರಕಾರ ಪ್ರಕಟಿಸಿದೆ.

ಡಿಸೆಂಬರ್ 19ಕ್ಕೆ ನಿಗದಿಯಾಗಿದ್ದ ಶೇಖ್ ಹಸೀನಾ ಅವರ ನವದೆಹಲಿ ಭೇಟಿಯನ್ನು, ಮುಂಬರುವ ಜನೆವರಿ 10 ಅಥವಾ 11ಕ್ಕೆ ನಿಗದಿಪಡಿಸುವ ಸಾಧ್ಯತೆಗಳಿವೆ ಎಂದು ವಿದೇಶಾಂಗ ಸಚಿವೆ ದಿಪು ಮೋನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತದ ಪ್ರಧಾನಿ ಮನಮೋಹನ್ ಸಿಂಗ್‌ ಅವರನ್ನು ಕೂಪನ್‌ಹೇಗನ್ ಶೃಂಗಸಭೆಯಲ್ಲಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭೇಟಿ ಮಾಡಲಿದ್ದಾರೆ ಎಂದು ಸಚಿವೆ ಮೋನಿ ತಿಳಿಸಿದ್ದಾರೆ.

208ರ ಡಿಸೆಂಬರ್ 29 ರಂದು ನಡೆದ ಚುನಾವಣೆಯಲ್ಲಿ ಅವಾಮಿ ಲೀಗ್ ಪಕ್ಷದ ನಾಯಕಿ ಶೇಖ್ ಹಸೀನಾ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ ನಂತರ, ಭಾರತದ ಅಹ್ವಾನವನ್ನು ದೇಶದ ಆಂತರಿಕ ಕಾರಣಗಳಿಂದಾಗಿ ಮುಂದೂಡಲಾಗಿತ್ತು ಎಂದು ಸಚಿವೆ ಮೋನಿ ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಸೀನಾ, ಬಾಂಗ್ಲಾದೇಶ, ಭಾರತ