ನೇಪಾಳದಲ್ಲಿ ಅರೆಸೊತ್ತಿಗೆ ದರ್ಬಾರು ನಡೆಸುತ್ತಿದ್ದ ವೇಳೆ ಭಾರತ ಮತ್ತು ನೇಪಾಳ ಸಂಬಂಧ ಅಷ್ಟಕಷ್ಟೇ ಆಗಿತ್ತು. ಆದರೆ ಇದೀಗ ದೊರೆ ಜ್ಞಾನೇಂದ್ರ ಅಧಿಕಾರ ಹೋದ ನಂತರ ನೇಪಾಳ ಮತ್ತು ಭಾರತ ಸೇನಾ ಸಹಕಾರಕ್ಕೆ ಮತ್ತೆ ಚಾಲನೆ ದೊರೆತಿದೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತ-ನೇಪಾಳ ಜಂಟಿಕಾರ್ಯದರ್ಶಿಗಳ ಮಾತುಕತೆ ಸಂಬಂಧ ಈ ನಿರ್ಧಾರಕ್ಕೆ ಬರಲಾಗಿದೆ.