ಪಾಕಿಸ್ತಾನ - ಅಫ್ಘಾನಿಸ್ತಾನ ಗಡಿಭಾಗದಲ್ಲಿರುವ ಅಲ್‌ಕೈದಾ ತಾಣಗಳ ಮೇಲೆ ಅಮೆರಿಕ ಶಂಕಿತ ದ್ರೋಣನಿಂದ ಎರಡು ಕ್ಷಿಪಣಿ ದಾಳಿಗಳನ್ನು ನಡೆಸಿದಾಗ, ಕನಿಷ್ಟ ಮೂವರು ಉಗ್ರರ ಹತರಾಗಿದ್ದಾರೆ ಎಂದು ಪಾಕ್ ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನಿಸ್ತಾನಕ್ಕೆ 30 ಸಾವಿರ ಹೆಚ್ಚುವರಿ ಸೈನಿಕರನ್ನು ರವಾನಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿಕೆ ನೀಡಿದ ನಂತರ, ಉತ್ತರ ವಜೀರಿಸ್ತಾನ್ ಪ್ರದೇಶದಲ್ಲಿ ಪ್ರಥಮ ಬಾರಿಗೆ ಕ್ಷಿಪಣಿ ದಾಳಿ ನಡೆಸಲಾಗಿದೆ.
ಉಗ್ರರಿಗೆ ಆಶ್ರಯ ತಾಣವಾಗಲು ಅವಕಾಶ ನೀಡಬಾರದು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಪಾಕಿಸ್ತಾನಕ್ಕೆಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯಲ್ಲಿ ವಾಹನದಲ್ಲಿದ್ದ ಮೂವರು ಉಗ್ರರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಗುಪ್ತಚರ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ವಜೀರಿಸ್ತಾನದ ಪ್ರಮುಖ ಪಟ್ಟಣವಾದ ಮಿರಾನ್‌ಶಾದಿಂದ ಪೂರ್ವಭಾಗದಲ್ಲಿ 10 ಕೀ.ಮಿ. ಸ್ಪಾಲ್ಗಾ ಗ್ರಾಮದಲ್ಲಿ ಅಮೆರಿಕದ ದ್ರೋಣ ದಾಳಿ ನಡೆದಿದೆ.