ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ:ಕಾಲ್ತುಳಿತಕ್ಕೆ 8 ವಿದ್ಯಾರ್ಥಿಗಳು ಬಲಿ (China | School | Stampede | Government)
Bookmark and Share Feedback Print
 
ಸೆಂಟ್ರಲ್ ಚೀನಾದ ಶಾಲೆಯೊಂದರಲ್ಲಿ ಸಂಜೆ ತರಗತಿಗಳನ್ನು ಮುಗಿಸಿ ಮೆಟ್ಟಿಲುಗಳಿಂದ ಇಳಿಯುತ್ತಿರುವ ಸಮಯದಲ್ಲಿ ನೂಕುನುಗ್ಗಲಿನಲ್ಲಿ ಉಂಟಾದ ಕಾಲ್ತುಳಿತಕ್ಕೆ 8 ವಿದ್ಯಾರ್ಥಿಗಳು ಮೃತರಾಗಿದ್ದು, 26 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜಿಯಾಂಗ್‌ಜಿಯಾಂಗ್ ನಗರದ ಖಾಸಗಿ ಯುಕಾಯಿ ಮಿಡ್ಲ್ ಸ್ಕೂಲ್‌ನಲ್ಲಿ ಸಂಜೆ ಸುಮಾರು 9 ಗಂಟೆಯ ವೇಳೆಗೆ ಸುಮಾರು 400 ವಿದ್ಯಾರ್ಥಿಗಳು ತರಗತಿಗಳನ್ನು ಮುಗಿಸಿಕೊಂಡು ಕೇವಲ ನಾಲ್ಕು ಅಡಿ ಅಗಲವಿರುವ ಮೆಟ್ಟಿಲುಗಳಿಂದ ಇಳಿಯುತ್ತಿರುವ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಮಾಧ್ಯಮಗಳು ಪ್ರಕಟಿಸಿವೆ.

ಮೃತರಾದವರಲ್ಲಿ ಏಳು ಬಾಲಕರು ಹಾಗೂ ಬಾಲಕಿ ಸೇರಿದ್ದಾರೆ. ಗಂಭೀರವಾಗಿ ಗಾಯಗೊಂಡ 8 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಬೀಜಿಂಗ್‌ನಿಂದ 720 ಮೈಲುಗಳ ದೂರದಲ್ಲಿರುವ ಜಿಯಾಂಗ್‌ಜಿಯಾಂಗ್ ನಗರದ ಖಾಸಗಿ ಶಾಲೆಯ ಮುಖ್ಯಸ್ಥನನ್ನು ಕಾಲ್ತುಳಿದ ಘಟನೆಯ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆಯ ಪ್ರಾಂಶುಪಾಲ ಮತ್ತು ಅಡಳಿತ ಮಂಡಳಿಯ ನಿರ್ದೇಶಕರನ್ನು ಬಂಧಿಸಲಾಗಿದ್ದು, ತನಿಖೆಗೆ ಒಳಪಡಿಸಲಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೀನಾ, ಶಾಲೆ, ಕಾಲ್ತುಳಿತ, ಸರಕಾರ