ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನಿಗಳನ್ನು ಬಗ್ಗುಬಡಿಯಲು ಪಾಕ್‌ಗೆ ಸೇನೆ: ಒಬಾಮಾ (Obama | Pakistan | Taliban)
Bookmark and Share Feedback Print
 
ತಾಲಿಬಾನ್ ಹಾಗೂ ಇತರ ಉಗ್ರರ ಶಿಬಿರಗಳ ಮೇಲೆ ಪಾಕಿಸ್ತಾನ ನಿರ್ಧರಿತ ಕಾರ್ಯಾಚರಣೆ ನಡೆಸಲು ವಿಫಲವಾದಲ್ಲಿ ಪಾಕ್‌ಗೆ ಸೇನೆಯನ್ನು ಕಳುಹಿಸುವ ಮೂಲಕ ಉಗ್ರರ ಶಿಬಿರಗಳನ್ನು ನಾಶಪಡಿಸಲು ಅಮೆರಿಕ ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಪಾಕ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಪಾಕಿಸ್ತಾನ ಸೇನೆ ಉತ್ತರ ವಜೀರಿಸ್ತಾನದಲ್ಲಿರುವ ಹಕ್ಕಾನಿ ಸಂಪರ್ಕ ಜಾಲ ಮತ್ತು ತಾಲಿಬಾನ್ ನಾಯಕ ಮುಲ್ಲಾ ಉಮರ್ ಹಾಗೂ ಬಲೂಚಿಸ್ತಾನನಲ್ಲಿ ಅವಿತಿದ್ದಾರೆ ಎಂದು ಶಂಕಿಸಲಾದ ಶುರಾ ಗುಂಪಿನ ಉನ್ನತ ನಾಯಕರು ಹಾಗೂ ಸದಸ್ಯರ ಮೇಲೆ ದಾಳಿ ನಡೆಸಲು ಅಮೆರಿಕ ಸೇನೆ ಬಯಸುತ್ತದೆ ಎಂದು ಮೂಲಗಳು ತಿಳಿಸಿವೆ.

ಹಕ್ಕಾನಿ ಹಾಗೂ ಶುರಾ ತಾಲಿಬಾನಿ ಗುಂಪುಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಇಲ್ಲಿಯವರೆಗೆ ಸಮ್ಮತಿಸುತ್ತಿಲ್ಲ ಎನ್ನುವುದು ಅಮೆರಿಕನ್ನರ್ ಭಾವನೆಯಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಅಮೆರಿಕದ ಸೇನಾಪಡೆ ಬುಡಕಟ್ಟು ಪ್ರದೇಶಗಳ ಮೇಲೆ ಏಕಪಕ್ಷೀಯವಾಗಿ ಮತ್ತಷ್ಟು ದ್ರೋಣ ದಾಳಿಗಳನ್ನು ನಡೆಸುವ ಮೂಲಕ ಉಗ್ರರ ನಾಶಕ್ಕೆ ಪ್ರಯತ್ನಿಸುತ್ತಿದೆ. ಒಂದು ವೇಳೆ ಅಗತ್ಯವಾದಲ್ಲಿ ವಿಶೇಷ ಕಾರ್ಯಾಚರಣೆ ಪಡೆಯನ್ನು ದೇಶದೊಳಗೆ ನುಗ್ಗಿಸಿ, ಅಲ್‌ಕೈದಾ ಮತ್ತು ತಾಲಿಬಾನ್ ನಾಯಕರನ್ನು ಸದೆಬಡೆಯಲು ಯೋಜನೆ ರೂಪಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಒಬಾಮಾ, ಪಾಕಿಸ್ತಾನ, ತಾಲಿಬಾನ್