ನಗರದಲ್ಲಿ ಸಂಭವಿಸಿದ ಸರಣಿ ಸ್ಫೋಟಗಳಲ್ಲಿ 90 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಇರಾಕ್‌ನ ಆಂತರಿಕ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಕಾರ್ಮಿಕ ಸಚಿವಾಲಯ ,ನ್ಯಾಯಾಲಯದ ಅವರಣ ಹಾಗೂ ವಿತ್ತ ಸಚಿವಾಲಯದ ನೂತನ ಕಟ್ಟಡದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದಕ್ಕಿಂತ ಮೊದಲು, ದಕ್ಷಿಣ ಬಾಗ್ದಾದ್‌ನಲ್ಲಿ ಆತ್ಮಾಹುತಿ ಬಾಂಬರ್ ದಳದ ಸದಸ್ಯ, ಪೊಲೀಸ್ ಕಾವಲು ಪಡೆಯ ಮೇಲೆ ದಾಳಿ ಮಾಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಾಗ್ದಾದ್‌ನಲ್ಲಿ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ನಡೆದ ನಾಲ್ಕು ದಾಳಿಗಳಿಂದಾಗಿ ಉಗ್ರರ ಸಾಮರ್ಥ್ಯ ಕುಂದಿಲ್ಲ ಎನ್ನುವುದು ತೋರಿಸುತ್ತದೆ. ಅಮೆರಿಕ ಸೇನಾಪಡೆಗಳು ವಾಪಸ್ ಮರಳುತ್ತಿರುವ ಹಿನ್ನೆಲೆಯಲ್ಲಿ ಇರಾಕ್ ಸೇನಾಪಡೆಗಳಿಗೆ ಹೆಚ್ಚಿನ ಆತಂಕ ಸೃಷ್ಟಿಸಿದೆ ಎಂದು ಇರಾಕ್ ಮೂಲಗಳು ತಿಳಿಸಿವೆ.
ಮುಂಬರುವ ವರ್ಷದಲ್ಲಿ ಸಂಸತ್ತಿಗೆ ಚುನಾವಣೆಗಳನ್ನು ಘೋಷಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿರುವಂತೆ, ಸರಣಿ ಸ್ಫೋಟಗಳಿಂದಾಗಿ ಭಧ್ರತಾ ಪಡೆಗಳಿಗೆ ಆತಂಕ ಸೃಷ್ಟಿಸಿದ್ದು, ಚುನಾವಣೆಯಲ್ಲಿ ವ್ಯಾಪಕ ಹಿಂಸಾಚಾರ ನಡೆಯುವ ಸಾಧ್ಯತೆಗಳಿವೆ ಎಂದು ಇರಾಕ್ ಸೇನಾಮೂಲಗಳು ತಿಳಿಸಿವೆ.