ಇಸ್ಲಾಮಾಬಾದ್ , ಮಂಗಳವಾರ, 8 ಡಿಸೆಂಬರ್ 2009( 17:18 IST )
ಪಾಕಿಸ್ತಾನ ರಾಷ್ಟ್ರಾಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ವಿರುದ್ಧದ ವಂಚನೆ ಪ್ರಕರಣ ಕೈ ಬಿಟ್ಟಿದ್ದರಿಂದ, ಬಿಲಿಯನ್‌ಗಟ್ಟಲೆ ಡಾಲರ್‌ಗಳ ಅನಧಿಕೃತ ಆರ್ಥಿಕ ಲಾಭವನ್ನು ಪಡೆದಿದ್ದಾರೆ ಎಂದು ಪಾಕ್‌ನ ಭ್ರಷ್ಟಾಚಾರ ನಿಗ್ರಹ ಕಾವಲು ಪಡೆ ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ
1990ರಲ್ಲಿ ಬೇನಜಿರ್ ಭುಟ್ಟೋ ಪ್ರಧಾನಿಯಾಗಿದ್ದ ಅವಧಿಯಲ್ಲಿ. ಜರ್ದಾರಿ 1.5 ಬಿಲಿಯನ್ ಡಾಲರ್ ಹಾಗೂ 22 ಬಿಲಿಯನ್ ರೂಪಾಯಿಗಳ ಸಂಪತ್ತನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಲೆಕ್ಕಪರಿಶೋದಕ ಸಂಸ್ಥೆ ದಾಖಲೆಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದೆ,
ಜರ್ದಾರಿಯವರನ್ನು ಅನಧಿಕೃತ ಆಸ್ತಿ ಸಂಪಾದನೆ ಹಾಗೂ ಭ್ರಷ್ಟಾಚಾರ ಕುರಿತಂತೆ ಪ್ರಕರಣವನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು. ಆದರೆ ಎರಡು ವರ್ಷಗಳ ಹಿಂದೆ ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷ್ರಫ್ ಜರ್ದಾರಿ ವಿರುದ್ಧದ ವಂಚನೆ ಪ್ರಕರಣ ಕೈಬಿಟ್ಟಿದ್ದರು.
ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ನೇತೃತ್ವದ 17 ನ್ಯಾಯಾಧೀಶರನ್ನೊಳಗೊಂಡ ಪೀಠ, ವಂಚನೆ ಪ್ರಕರಣದಲ್ಲಿ ಲಾಭ ಪಡೆದವರ ವರದಿಯನ್ನು ಕೇಳಿದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಲೆಕ್ಕ ಪರಿಶೋದಕ ಸಂಸ್ಥೆ ವರದಿಯನ್ನು ಸಲ್ಲಿಸಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ,