ಭಾರತದಲ್ಲಿ ಸೆರೆಸಿಕ್ಕ ಹವಾಲಾ ರೂವಾರಿ ನರೇಶ್ ಜೈನ್‌ಗೆ ಬ್ರಿಟನ್ ಪ್ರವೇಶಕ್ಕೆ ಅಲ್ಲಿಯ ಸರ್ಕಾರ ನಿಷೇಧ ಹೇರಿದೆ. ನರೇಶ್ ಜೈನ್ ಅಕ್ರಮ ಮಾದಕ ದ್ರವ್ಯ ಸಾಗಣೆ ಜಾಲಗಳಿಗೆ ಧನ ಸಹಾಯ ಮಾಡುತ್ತಿದ್ದ ಎಂಬ ಆರೋಪ ಹೊರಿಸಲಾಗಿದೆ. ಜೈನ್ ಜಾಗತಿಕವಾಗಿ ಹವಾಲಾ ಹಣ ಸರಬರಾಜು ಜಾಲ ಹೊಂದಿರುವುದಾಗಿ ಬ್ರಿಟನ್ ಅಪರಾಧ ತನಿಖಾ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದರು.