ಜಾಗತಿಕ ಉಗ್ರಗಾಮಿ ಸಂಘಟನೆಯಾದ ಅಲ್‌ಕೈದಾದ ಮುಖಂಡ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆಗೈಯುವವರೆಗೆ ಅಥವಾ ವಶಕ್ಕೆ ತೆಗೆದುಕೊಳ್ಳುವವರೆಗೆ ಅಲ್‌ಕೈದಾವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಉನ್ನತ ಕಮಾಂಡರ್ ಅಭಿಪ್ರಾಯಪಟ್ಟಿದ್ದಾರೆ.
ಒಸಾಮಾ ಬಿನ್ ಲಾಡೆನ್‌ನನ್ನು ವಶಕ್ಕೆ ತೆಗೆದುಕೊಳ್ಳುವುದು ಅಥವಾ ಹತ್ಯೆಗೈಯುವುದು ಸಾಧ್ಯವಾಗಲಿದೆ ಎಂದು ನಾನು ಭಾವಿಸಿಲ್ಲವೆಂದು ಅಫ್ಘಾನಿಸ್ತಾನದಲ್ಲಿರುವ ನ್ಯಾಟೋ ಪಡೆಗಳ ಕಮಾಂಡರ್ ಜನರಲ್ ಸ್ಟಾನ್‌ಲೇ ಮ್ಯಾಕ್ ಕ್ರಿಸ್ಟಲ್ ಹೇಳಿದ್ದಾರೆ.
ಶ್ರಸ್ತ್ರಾಸ್ತ್ರ ಸೇವಾ ಸಮಿತಿಯ ಎದುರು ಹಾಜರಾದ ಜನರಲ್ ಮ್ಯಾಕ್ ಕ್ರಿಸ್ಟಲ್, ಒಸಮಾ ಬಿನ್ ಲಾಡೆನ್ ಅಲ್‌ಕೈದಾದ ಪ್ರಮುಖ ಬಿಂದುವಾಗಿದ್ದು, ಅವರ ಲಾಡೆನ್ ಮೂಲಕವೇ ವಿಶ್ವದಾದ್ಯಂತ ಸಂಪರ್ಕ ಸಾಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
11ನೇ ಸೆಪ್ಟೆಂಬರ್ 2001 ರಂದು ನಡೆಸಿದ ದಾಳಿಯಲ್ಲಿ ಅಮೆರಿಕ ಜನತೆ ಹಾಗೂ ಇತರ ದೇಶಗಳ ಜನರನ್ನು ಹತ್ಯೆಗೈಯಲು ಕಾರಣನಾದ ಒಸಮಾ ಬಿನ್ ಲಾಡೆನ್ ಒಂದು ದಿನ ಹತ್ಯೆಗೈಯಲಾಗುವುದು ಅಥವಾ ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಅಮೆರಿಕ ಹಾಗೂ ಇತರ ರಾಷ್ಟ್ರಗಳ ಜನತೆಯಲ್ಲಿ ಮಹತ್ವದ ಸಂಗತಿಯಾಗಿ ಉಳಿದಿಲ್ಲ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮ್ಯಾಕ್ ಕ್ರಿಸ್ಟಲ್,ಒಸಾಮಾ ಅಫ್ಘಾನಿಸ್ತಾನದಲ್ಲಿದ್ದಲ್ಲಿ, ನಮ್ಮ ಸೇನಾಪಡೆಗಳು ಒಸಾಮಾ ವಿರುದ್ಧದ ಕಾರ್ಯಾಚರಣೆಗೆ ಆದ್ಯತೆ ನೀಡಲಿವೆ. ಒಂದು ವೇಳೆ ಅಫ್ಘಾನಿಸ್ತಾನದ ಹೊರಗಿದ್ದಲ್ಲಿ ನನ್ನ ವ್ಯಾಪ್ತಿಯ ಹೊರತಾದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.