ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 4ಲಕ್ಷ ಅಫ್ಘನ್ ಸೇನೆ ನಮ್ಮ ಗುರಿ: ಕ್ರಿಸ್ಟಲ್ (US | Afghan | security forces | Mullen)
Bookmark and Share Feedback Print
 
ಅಫ್ಘಾನಿಸ್ತಾನದಲ್ಲಿ ಮುಂಬರುವ 2013ರ ವೇಳೆಗೆ 4 ಲಕ್ಷ ಭಧ್ರತಾ ಪಡೆಗಳಿಗೆ ತರಬೇತಿ ನೀಡಲು ಅಮೆರಿಕ ಯೋಜನೆಯನ್ನು ರೂಪಿಸಿದೆ. ಅದರಲ್ಲಿ ಅಫ್ಘಾನ್ ಸೇನೆ ಪಡೆಗೆ 240,000 ಮತ್ತು 160,000 ರಾಷ್ಟ್ರೀಯ ಪೊಲೀಸ್ ಪಡೆಗೆ ಸೇರ್ಪಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ ಎಂದು ನ್ಯಾಟೋ ಪಡೆಯ ಕಮಾಂಡರ್ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿರುವ ಅಮೆರಿಕದ ಹಾಗೂ ನ್ಯಾಟೋ ಕಮಾಂಡರ್ ಜನರಲ್ ಮ್ಯಾಕ್‌ ಕ್ರಿಸ್ಟಲ್ ಮಾತನಾಡಿ, ಜುಲೈ 2011ರವರೆಗೆ 3 ಲಕ್ಷ ಅಫ್ಘನ್ ಸೇನೆಯನ್ನು ಸಿದ್ಧಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದ ರಾಷ್ಟ್ರೀಯ ಸೇನಾ ಸಂಖ್ಯೆಯನ್ನು ಹೆಚ್ಚಳಗೊಳಿಸುವುದು ನಮ್ಮ ಆದ್ಯತೆಯಾಗಿದೆ ಎಂದು ನಾನು ಭಾವಿಸಿರುವುದಾಗಿ ಕ್ರಿಸ್ಟಲ್ ತಿಳಿಸಿದ್ದಾರೆ.

ಗುರಿಯನ್ನು ತಲುಪಲು ಸಮಯದ ಅಭಾವವಿದೆ ಎಂದು ಶಿಫಾರಸು ಮಾಡಿದ್ದೇನೆ.ಆದರೆ ಒಂದು ವೇಳೆ ಉಗ್ರರ ದಾಳಿಯಲ್ಲಿ ಇಳಿಕೆಯಾದಲ್ಲಿ ಗುರಿಯನ್ನು ತಲುಪಲು ಸುಲಭವಾಗಬಹುದು. ಅಫ್ಘಾನ್ ಸೇನೆಗೆ ಸೇನಾನೇಮಕಾತಿ ಸೇರಿದಂತೆ ಇತರ ವಿಷಯಗಳತ್ತ ಗಮನಹರಿಸಿ ಸೇನೆಯ ಅಭಿವೃದ್ಧಿಯತ್ತ ಗಮನಹರಿಸಬಹುದು ಎಂದು ಕ್ರಿಸ್ಟಲ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಆದೇಶದಂತೆ ಅಮೆರಿಕನ್ ಪಡೆಗಳು ಜುಲೈ 2011ರಿಂದ ದೇಶಕ್ಕೆ ಮರಳುತ್ತಿರುವುದರಿಂದ, ದೇಶದ ಹಿತಾಸಕ್ತಿ ರಕ್ಷಣೆಗಾಗಿ ಅಫ್ಘಾನ್ ಸೇನೆಯನ್ನು ಶೀಘ್ರದಲ್ಲಿ ಹೆಚ್ಚಳಗೊಳಿಸಿ ಬಲಪಡಿಸುವುದು ಅಗತ್ಯವಾಗಿದೆ ಎಂದು ಅಮೆರಿಕದ ಸೇನಾತಜ್ಞರು ಹಾಗೂ ರಾಜಕೀಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ